ಕೊಪ್ಪಳ: ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಈ ಬಾರಿ ಕನಿಷ್ಠ 4.80 ಲಕ್ಷದಿಂದ 5.5 ಲಕ್ಷದ ಮೈಸೂರು ಪಾಕ್ ಉಣಬಡಿಸಲು ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್ ವಿಜಯಕುಮಾರ್ ಗೆಳೆಯರ ಬಳಗ ಸಿದ್ಧತೆ ಮಾಡಿಕೊಂಡಿದೆ.

ಜಾತ್ರೆಗೆ ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಬಳಗದ ಸದಸ್ಯರು ಎಂಟು ವರ್ಷಗಳಿಂದ ಭಿನ್ನ ತಿನಿಸು ಮಾಡಿಸಿ ಸೇವೆಯ ರೂಪದಲ್ಲಿ ಮಠಕ್ಕೆ ಅರ್ಪಿಸುತ್ತಾರೆ. ಮಹಾರಥೋತ್ಸವ ಹಾಗೂ ಅದರ ಮರುದಿನ ಮಠಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಸಿಹಿ ಬಡಿಸಲಾಗುತ್ತದೆ.

ಬಳಗದ ಸ್ನೇಹಿತರು ಹಿಂದಿನ ವರ್ಷ 12 ಲಕ್ಷ ಸಾವಯವ ಬೆಲ್ಲದ ಜಿಲೇಬಿಯನ್ನು ಉಣಬಡಿಸಿದ್ದರು. ಅದಕ್ಕೂ ಹಿಂದಿನ ವರ್ಷಗಳ ಜಾತ್ರೆಯ ಸಮಯದಲ್ಲಿ ಶೇಂಗಾ ಹೋಳಿಗೆ, ಸಿಹಿ ಬೂಂದಿ, ಸಿಹಿ ಮಾದಲಿ ಹೀಗೆ ತರಹೇವಾರಿ ತಿನಿಸು ತಯಾರಿಸಿ ಕೊಟ್ಟಿದ್ದರು.

2026ರ ಗವಿಮಠದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಜ. 5ರಂದು ನಡೆಯಲಿದ್ದು, ಮಠದ ಮಹಾದಾಸೋಹದ ಆವರಣದಲ್ಲಿಯೇ ಮೈಸೂರು ಪಾಕ್ ತಯಾರಿಸಲು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಒಪ್ಪಿಗೆಯನ್ನೂ ಬಳಗದವರು ಪಡೆದುಕೊಂಡಿದ್ದಾರೆ.

60 ಕ್ವಿಂಟಲ್ ಸಕ್ಕರೆ ಬಳಸಿ ಮೈಸೂರು ಪಾಕ್ ತಯಾರಿಸಲು ಯೋಜನೆ ಸಿದ್ಧವಾಗಿದೆ. ಒಂದು ಕ್ವಿಂಟಲ್ ಮೈಸೂರು ಪಾಕ್ ತಯಾರಿಸಲು ಅಂದಾಜು 75 ಕೆ.ಜಿ. ಅಡುಗೆ ಎಣ್ಣೆ, 30 ಕೆ.ಜಿ. ಹಸಿ ಕಡಲೆಹಿಟ್ಟು, ಐದು ಕೆ.ಜಿ. ಮೈದಾಹಿಟ್ಟು, ಐದು ಕೆ.ಜಿ. ತುಪ್ಪ, ಕಾಲು ಕೆ.ಜಿ. ಏಲಕ್ಕಿ ಹಾಗೂ ಇನ್ನಿತರ ಸಾಮಗ್ರಿ ಬಳಕೆ ಆಗುವ ಅಂದಾಜಿದೆ ಎಂದು ಸಂಘಟಕರು ಹೇಳುತ್ತಾರೆ.

ಒಂದು ವೇಳೆ ಭಕ್ತರ ಸಂಖ್ಯೆ ಹೆಚ್ಚಾದರೆ ಅದಕ್ಕೆ ಅನುಗುಣವಾಗಿ ಮೈಸೂರು ಪಾಕ್ ತಯಾರಿಸಲು ಬಳಗದವರು ತಯಾರಿ ಮಾಡಿಕೊಂಡಿದ್ದಾರೆ.

ವಿಜಯಕುಮಾರ್ ಅವರ ಐದಾರು ಜನರ ಸ್ನೇಹಿತರ ಬಳಗವಿದೆ. ಮಠದ ಆವರಣದಲ್ಲಿ ಸತತವಾಗಿ ಎರಡು ದಿನ ಸಿಹಿ ತನಿಸು ತಯಾರಿಸುವ, ಹಂಚುವ ಮತ್ತು ಇದಕ್ಕೆ ನೆರವಾಗುವ ಅನೇಕ ಭಕ್ತರ ದೊಡ್ಡ ದಂಡು ಬಳಗದ ಜೊತೆ ಕೈ ಜೋಡಿಸಿದೆ.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯ ಪ್ರೇರಣೆಯಿಂದಾಗಿ ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ಸಿಹಿ ತಿನಿಸು ತಯಾರಿಸಲಾಗುತ್ತಿದೆ. ಸೇವೆ ಆರಂಭಿಸಿದ ಬಳಿಕ ಬಹಳಷ್ಟು ಒಳ್ಳೆಯದಾಗಿದೆ.
ಈಶ್ವರ ಹೊಗರನಾಳ, ವಕೀಲರು, ಬಳಗದ ಸದಸ್ಯ

ಖರ್ಚು ವೆಚ್ಚ ನಿರ್ವಹಣೆ ಹೇಗೆ?

ಗವಿಮಠದ ಜಾತ್ರೆಗೆ ಪ್ರತಿವರ್ಷವೂ ಲಕ್ಷಾಂತರ ಸಿಹಿ ತಿನಿಸು ತಯಾರಿಸಿಕೊಡಲು ಐದಾರು ಸ್ನೇಹಿತರು ತಲಾ ಒಂದಷ್ಟು ಹಣ ನೀಡಿ ಸಹಕಾರ ಮನೋಭಾವನೆಯಿಂದ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಗವಿಮಠ ಹಾಗೂ ಸ್ವಾಮೀಜಿಯವರ ಆಶೀರ್ವಾದದಿಂದ ಆದಷ್ಟು ಸೇವೆ ಮಾಡುತ್ತಿದ್ದೇವೆ. ಲಕ್ಷಾಂತರ ಭಕ್ತರು ಬರುವ ಮಠಕ್ಕೆ ಇದು ಅಳಿಲುಸೇವೆ ಅಷ್ಟೇ’ ಎಂದು ಬಳಗದ ಪ್ರಮುಖರಾದ ಉದ್ಯಮಿ ವಿಜಯಕುಮಾರ ಗುಡಿಹಾಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.