ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ರಾಯಚೂರು ಮಂತ್ರಾಲಯ ಮಠದಿಂದ ಪದ್ಮನಾಭತೀರ್ಥರ ಪೂರ್ವಾರಾಧನೆ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಜರುಗಿತು.

ಬೆಳಿಗ್ಗೆ ಶ್ರೀಮನ್ಮೂಲ ರಾಮ ದೇವರಿಗೆ ಪೂಜೆ, ಪದ್ಮನಾಭತೀರ್ಥರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು. ಹಾಗೆಯೇ ಭಕ್ತರಿಗೆ ಮುದ್ರಧಾರಣ, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು. ಸುಪ್ರಿಂಕೋರ್ಟ್ ಆದೇಶದಂತೆ ಒಂದೂವರೆ ದಿನ ರಾಯರ ಮಠ, ಒಂದೂವರೆ ದಿನ ಉತ್ತರಾಧಿಮಠದವರು ಪದ್ಮನಾಭ ತೀರ್ಥರ ಆರಾಧನೆ ನಡೆಸಲಿದ್ದಾರೆ.

ರಾಜಾ ಎಸ್.ಅಪ್ರಮಯಚಾರ, ಎನ್.ವಾದಿರಾಜಾಚಾರ್, ರಮಣರಾವ್, ಪಂಡಿತ್ ಪವನಚಾರ ಕುರಡಿ, ಪಂ.ಶ್ಯಾಮಚಾರ್, ಅನಂತ ಪುರಾಣಿಕ, ಪ್ರಕಾಶ ಮಂತ್ರಾಲಯ, ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಶ್ರೀನಿವಾಸರಾವ್ ಡಣಾಪುರ, ವಿಜಯರಾವ ಡಣಾಪುರ, ವ್ಯವಸ್ಥಾಪಕ ಸಾಮವೇಧ ಗುರುರಾಜ ಆಚಾರ, ಮಧುಸೂಧನ ಆಚಾರ್, ಸಂಜೀವ ಕುಲಕರ್ಣಿ, ಪ್ರಲ್ಹಾದರಾವ್ ನವಲಿ, ರಾಘವೇಂದ್ರರಾವ ಬೇವಿನಾಳ, ಸುಧೀರ ನವಲಿ ಸೇರಿದಂತೆ 500ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.