ಕೊಪ್ಪಳ: ದಸರಾ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟದ ನೆಟ್ಬಾಲ್ನಲ್ಲಿ ಪುರುಷರ ತಂಡ ಚಾಂಪಿಯನ್ ಆದರೆ, ಮಹಿಳಾ ತಂಡ ಒಂದೂ ಪಂದ್ಯವಾಡದೆ ರಾಜ್ಯಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿತು.

ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಪುರುಷರ ನೆಟ್ಬಾಲ್ನಲ್ಲಿ ಮೂರು ತಂಡಗಳಷ್ಟೇ ಭಾಗವಹಿಸಿದ್ದವು. ಕೊಪ್ಪಳದ ತಂಡ ಫೈನಲ್ನಲ್ಲಿ ಬಳ್ಳಾರಿ ತಂಡವನ್ನು ಮಣಿಸಿದರೆ, ಮಹಿಳಾ ವಿಭಾಗದ ಏಕೈಕ ತಂಡವಾಗಿದ್ದ ಕೊಪ್ಪಳ ಸರಾಗವಾಗಿ ‘ಅರಮನೆಯ ನಗರಿ’ಯ ಪ್ರವೇಶ ಸುಲಭ ಮಾಡಿಕೊಂಡಿತು. ಮಹಿಳಾ ತಂಡದಲ್ಲಿ ಇರುವವರು ಚೈತನ್ಯ ಸಮೂಹದ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

ಕುಸ್ತಿ: ಪುರುಷರ 57 ಕೆ.ಜಿ. ಫ್ರೀ ಸ್ಟೇಲ್ ಕುಸ್ತಿ ಸ್ಪರ್ಧೆಯಲ್ಲಿ ಕಲಬುರಗಿಯ ಅಮೃತ್, 65 ಕೆ.ಜಿ.ಯಲ್ಲಿ ವಿಜಯನಗರ ಜಿಲ್ಲೆಯ ಪರಶುರಾಮ ಎನ್., 70 ಕೆ.ಜಿ.ಯಲ್ಲಿ ಯಾದಗಿರಿ ಜಿಲ್ಲೆಯ ನಿಂಗಪ್ಪ, 74 ಕೆ.ಜಿ.ಯಲ್ಲಿ ಯಾದಗಿರಿಯ ಬಸವರಾಜ, 92 ಕೆ.ಜಿ. ಮೇಲಿನ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ಹುಲಗಪ್ಪ ಮೊದಲಿಗರಾದರು. ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ವಿಜಯಲಕ್ಷ್ಮಿ, 57 ಕೆ.ಜಿ.ಯಲ್ಲಿ ಅಶ್ವಿನಿ ಚಾಂಪಿಯನ್ ಆದರು.

ಟೇಕ್ವಾಂಡೊ: ಪುರುಷರ ಟೇಕ್ವಾಂಡೊ ಸ್ಪರ್ಧೆಯ ಕೊಪ್ಪಳ ಜಿಲ್ಲೆಯ ಹರ್ಷವರ್ಧನ (45 ಕೆ.ಜಿ. ವಿಭಾಗ), ಕಿರಣ ಎಸ್. ಬೆಟಗೇರಿ (50 ಕೆ.ಜಿ.), ಅಜಯಕುಮಾರ (62 ಕೆ.ಜಿ.), ಮಣಿಕಂಠ ಸಿ.ಎಂ. (85 ಕೆ.ಜಿ.), ಮಹಿಳೆಯರ ವಿಭಾಗದಲ್ಲಿ ಅನುಷಾ (42 ಕೆ.ಜಿ.), ದುರಗವ್ವ (70 ಕೆ.ಜಿ.) ಮತ್ತು ಮಹಾಲಕ್ಷ್ಮೀ (70 ಕೆ.ಜಿ. ಮೇಲ್ಪಟ್ಟು) ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಪರೀಕ್ಷೆ ಸಮಯದಲ್ಲಿಯೇ ಕ್ರೀಡಾಕೂಟ ಆಯೋಜನೆಗೆ ಆಕ್ಷೇಪ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಕೊರತೆ ಸಾಂಪ್ರದಾಯಿಕ ಕ್ರೀಡೆ ಕುಸ್ತಿಯಲ್ಲಿಯೂ ಪೈಲ್ವಾನರ ಕೊರತೆ

ವಿಭಾಗ ಮಟ್ಟದ ಕ್ರೀಡಾಕೂಟಗಳನ್ನು ಪೂರ್ಣಗೊಳಿಸಿದ್ದೇವೆ. ಹೆಚ್ಚು ಸ್ಪರ್ಧಿಗಳು ಬಂದಿದ್ದರೆ ಕ್ರೀಡಾಪಟುಗಳ ಸಾಮರ್ಥ್ಯ ಒರೆಗೆ ಹಚ್ಚಲು ಸಾಧ್ಯವಾಗುತ್ತಿತ್ತು.
ವಿಠ್ಠಲ ಜಾಬಗೌಡರ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.