ಕೊಪ್ಪಳ: ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅವರತ್ತ ಕುರ್ಚಿ ಎಸೆಯಲು ಯತ್ನಿಸಿದ ಘಟನೆ ನಡೆದಿದೆ.

ಸಂಸದ ಕೆ. ರಾಜಶೇಖರ್ ಹಿಟ್ನಾಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಹೆಸರನ್ನು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸೇರಿಸಿಲ್ಲ ಎಂಬುದು ಗದ್ದಲಕ್ಕೆ ಕಾರಣವಾಗಿದೆ.

ಕಾರ್ಯಕ್ರಮದ ವೇಳೆ ಶಿಷ್ಠಾಚಾರ ಉಲ್ಲಂಘನೆಯಾಗಿದೆ ಎಂದು ದೂರಿದ ಕಾಂಗ್ರೆಸ್ ಕಾರ್ಯಕರ್ತರು, ಕುರ್ಚಿ ಬಿಸಾಡಿದ್ದು ಮಾತ್ರವಲ್ಲದೆ ಸೋಮಣ್ಣ ಅವರ ಕಾರಿಗೂ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮಣ್ಣ ಅವರತ್ತಲೂ ಕುರ್ಚಿ ಎಸೆಯಲಾಗಿದೆ. ಆದರೆ, ಅವರ ಅಂಗರಕ್ಷಕರು ಅದನ್ನು ತಡೆದಿದ್ದಾರೆ. ಗದ್ದಲ ಸೃಷ್ಟಿಯಾದ ಕಾರಣ, ಸೋಮಣ್ಣ ಅವರು ಕೇವಲ ಐದೇ ನಿಮಿಷಗಳಲ್ಲಿ ವಾಪಸ್ ತೆರಳಿದ್ದಾರೆ.

ಹಿಟ್ಬಾಳ, ಮುನಿರಾಬಾದ್ ಹಾಗೂ ಗಿಣಗೇರಾ ಸಂಪರ್ಕಿಸುವ ಎಲ್ಸಿ ಸಂಖ್ಯೆ 77 ಮಾರ್ಗದ ಬದಲಿಗೆ, ₹ 27 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೋಮಣ್ಣ, ಕಾಮಗಾರಿಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು. ಕಾರ್ಯಕ್ರಮದ ಸಂಬಂಧ ಯಾವುದೇ ಶಿಷ್ಠಾಚಾರ ಉಲ್ಲಂಘನೆಯಾಗಿಲ್ಲ. ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.