ಕೊಪ್ಪಳ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ವನ್ನು ಒಪ್ಪಿಕೊಳ್ಳುವವರು ದೇಶಭಕ್ತರಲ್ಲ. ದೇಶ ವಿರೋಧಿಗಳು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

‘ಆರ್ಎಸ್ಎಸ್ ಯಾವ ಮೂಲದಿಂದ ದೇಶಭಕ್ತ ಸಂಘ ಅಂತ ಹೇಳುತ್ತೀರಿ? ಈ ಸಂಘಟನೆ ಮಹಾತ್ಮ ಗಾಂಧಿ, ಬುದ್ಧ, ಬಸವಣ್ಣ ಹಾಗೂ ಸಂವಿಧಾನ ರಚಿಸಿದ ಬಿ.ಆರ್. ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದೇ ಇಲ್ಲ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನೂ ಈ ಸಂಘ ಗೌರವಿಸುವುದಿಲ್ಲ. ಇವರನ್ನು ಹೇಗೆ ದೇಶಭಕ್ತ ಸಂಘಟನೆ ಎಂದು ಕರೆಯಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಆರ್ಎಸ್ಎಸ್ನವರು ರಾಷ್ಟ್ರಗೀತೆ ಹಾಡುವುದಿಲ್ಲ, ‘ನಮಸ್ತೇ ಸದಾ ವತ್ಸಲೇ’ ಹಾಡುತ್ತಾರೆ. ಇವರು ದೇಶಭಕ್ತರಲ್ಲ, ಕೋಮುವಾದಿಗಳು. ಇಂಥ ಸಂಸ್ಥೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು. ಸರ್ಕಾರ ಅಮಾನತು ಮಾಡಿಲ್ಲ. ಆದರೆ ಯಾವುದೇ ಸಂಘಟನೆ ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ’ ಎಂದು ಹೇಳಿದರು.

‘ಸುಧಾ ಹಾಗೂ ನಾರಾಯಣ ಮೂರ್ತಿಯವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಿಲ್ಲ ಎನ್ನುವುದನ್ನು ಅವರೇ ಬಹಿರಂಗಪಡಿಸಿದ್ದಾರೆ. ಬ್ರಾಹ್ಮಣ ಸಮುದಾಯದಲ್ಲಿಯೂ ಬಡವರು ಇದ್ದಾರೆ. ಎಲ್ಲರೂ ಪ್ರಲ್ಹಾದ ಜೋಶಿ, ತೇಜಸ್ವಿ ಸೂರ್ಯ ಅವರಂತೆಯೇ ಶ್ರೀಮಂತರೇ? ಇದು ಆರ್ಥಿಕ–ಸಾಮಾಜಿಕ ಸಮೀಕ್ಷೆ. ಬಡವರು ಸರ್ಕಾರದ ಸವಲತ್ತು ಪಡೆಯಬಾರದು ಎನ್ನುವ ಮನಃಸ್ಥಿತಿ ಅವರದ್ದು’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.