ಈ ಬಾರಿ ತೊಗರಿ ಉತ್ತಮ ಇಳುವರಿ ಬಂದಿದೆ ನಾವು ತೊಗರಿ ಬೆಳೆದರೂ ಜಿಪಿಎಸ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ನಮೂದಾಗದ ಕಾರಣ ಕೇಳಿದಷ್ಟು ದರಕ್ಕೆ ದಲ್ಲಾಳಿಗಳಿಗೆ ಕೊಟ್ಟು ಬಂದಿದ್ದೇನೆ
ಹನುಮಂತ ಚನ್ನದಾಸರ ಕಂದಕೂರು ರೈತ
ರೈತರ ತೊಗರಿ ದಲ್ಲಾಳಿಗಳ ಗೋದಾಮು ಸೇರಿದ ಮೇಲೆ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗುತ್ತದೆ. ಇದು ರೈತರ ದೌರ್ಭಾಗ್ಯ. ಈ ಬಗ್ಗೆ ಈ ಭಾಗದ ಸಚಿವರು ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕಿದೆ
ಶಂಕರಗೌಡ ಪಾಟೀಲ ಚಳಗೇರಿ ರೈತ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ನಾಫೆಡ್‌ದಿಂದ ಈ ಬಗ್ಗೆ ಸೂಚನೆ ಬರಬೇಕಿದೆ
ಕೃಷ್ಣಮೂರ್ತಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ
ತೊಗರಿ ಖರೀದಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಅಲ್ಲದೆ ರೈತರ ವಿಷಯವಾಗಿಯೇ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ಪಕ್ಷದಿಂದ ನಿಲುವಳಿ ಸೂಚನೆ ಮಂಡಿಸುತ್ತೇವೆ