ಕನಕಗಿರಿ: ಯಾವ ವಿಶ್ವವಿದ್ಯಾಲಯವೂ ಕಲಿಸದ ಶಿಕ್ಷಣವನ್ನು ಬಡತನ, ಹಸಿವು ಕಲಿಸುತ್ತದೆ ಎಂಬ ಮಾತು ಅಕ್ಷರಶಃ ಯಮನೂರಸಾಬ್ ಅವರಿಗೆ ಅನ್ವಯಿಸುತ್ತದೆ.

ಬಡ ಕುಟುಂಬದಲ್ಲಿ ಜನಿಸಿದ ಯಮನೂರಸಾಬ್ ದೊಡ್ಡಮ್ಮನ ಅಶ್ರಯದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೊಟ್ಟೆಪಾಡಿಗೆ ವಲಸೆ ಹೋಗಿದ್ದ ಸಮಯದಲ್ಲಿ ನಾಟಕದಲ್ಲಿ ಅಭಿನಯಿಸುವ ಗೀಳು ಹಚ್ಚಿಕೊಂಡು ಕಳೆದ ನಾಲ್ಕು ದಶಕಗಳಿಂದಲೂ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜೆಸ್ಕಾಂನಲ್ಲಿ ದಿನಗೂಲಿ ಕೆಲಸ ಮಾಡಿ ಅಂತಿಮವಾಗಿ ಲೈನ್ಮ್ಯಾನ್ (ಮಾರ್ಗದಾಳು) ಆಗಿ ಪೂರ್ಣಕಾಲಿಕ ವೃತ್ತಿಗೆ ಸೇರಿದರೂ ನಾಟಕದಲ್ಲಿ ಅಭಿನಯಿಸುವ ಪ್ರವೃತ್ತಿಯನ್ನು ನಿವೃತ್ತಿಯಾಗಿ ಹತ್ತು ವರ್ಷ ಕಳೆದರೂ ಬಿಟ್ಟಿಲ್ಲ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಯಮನೂರಸಾಬ್ ಅವರ ಅಭಿನಯದ ಪಯಣ ‘ಭಕ್ತ ಮಾರ್ಕಂಡೇಯ’ ನಾಟಕದ ಮೂಲಕ ಆರಂಭವಾಗಿದೆ.

ದಾರಿದೀಪ ಹಾಗೂ ಹೆಣ್ಣು ಮಗಳು ನಾಟಕಗಳಲ್ಲಿ ಸ್ತ್ರೀ ಪಾತ್ರಕ್ಕೆ ಜೀವತುಂಬಿ ಕಲಾ ರಸಿಕರ ಮನ ಗೆದ್ದಿದ್ದಾರೆ. ‘ನಾನಲ್ಲ ವಂಚಕ’, ‘ಚಿನ್ನದ ಗೊಂಬೆ’, ‘ಗುರಿ ಸಾಧಿಸಿದ ಗಂಡು’, ‘ಹೋಗಿ ಬಾ ತಂಗಿ’... ಹಲವಾರು ನಾಟಕಗಳಲ್ಲಿ ನಿರಂತರವಾಗಿ ಅಭಿನಯಿಸುತ್ತ ನಟನೆಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ.

‘ಕೆರಳಿದ ಗಂಡು ಹುಲಿ’ ನಾಟಕ ಪ್ರದರ್ಶಿಸಲು ಸಿದ್ಧತೆಯಲ್ಲಿದ್ದಾಗ ಹುಲಿಯನ (ನಾಯಕ) ಪಾತ್ರ ಮಾಡಲು ಮೂವರು ಪ್ರಯತ್ನಿಸಿದರೂ ನಿಭಾಯಿಸಲಿಲ್ಲ ಯಮನೂರಸಾಬ್ರ ಕಲಾಸಕ್ತಿ ಅರಿತಿದ್ದ ನಾಟಕ ಕಂಪನಿಯವರು ಆ ಪಾತ್ರವನ್ನು ನೀವೇ ಮಾಡಬೇಕು ಎಂದು ಒತ್ತಾಯಿಸಿದರು. ಇದರಿಂದ ಪ್ರೇರಣೆಗೊಂಡ ಯಮನೂರು ಪಾತ್ರವನ್ನು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಅಭಿನಯಿಸಿ ಎಲ್ಲರಿಂದಲೂ ಸೈ ಎನ್ನಿಸಿಕೊಂಡರು.

ಈ ಪಾತ್ರದಿಂದ ಕಲಾ ಸಂಘದ ಎಲ್ಲಾ ನಾಟಕಗಳಲ್ಲಿಯೂ ಅಭಿನಯಿಸುವ ಭಾಗ್ಯ ಒದಗಿ ಬಂದಿತು ಎಂದು ಸ್ಥಳೀಯರು ತಿಳಿಸುತ್ತಾರೆ.

‘ಮಗ ಹೋದರೂ ಮಾಂಗಲ್ಯ ಬೇಕು‘, ‘ಮತ್ತೆ ಕುಡುಕ ಕಟ್ಟಿದ ತಾಳಿ’, ‘ರೈತನ ಮಕ್ಕಳು’, ‘ಆಶಾಲತಾ’, ‘ಮಗ ತಂದ ಮಾಂಗಲ್ಯ’, ‘ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನರು’, ‘ಧರ್ಮದ ತಂದೆ ತಾಯಿಗೆ ಕರ್ಮದ ಮಕ್ಕಳು’... ಸಾಲುಸಾಲು ನಾಟಕಗಳಲ್ಲಿ ಅಭಿನಯಿಸಿ ಪ್ರತಿಭಾವಂತ ಕಲಾವಿದರಾಗಿ ಹೊರಹೊಮ್ಮಿದ್ದಾರೆ.

‘ಶ್ರೀ ಗುರು ಪುಟ್ಟರಾಜ ಡ್ರಾಮಾ ಸೀನ್ಸ್’ ಹೆಸರಿನಲ್ಲಿ ಡ್ರಾಮಾ ಸೀನ್ಸ್ ಸೆಟ್ ನಡೆಸುತ್ತಿದ್ದು ಲಾಭದ ಕಡೆಗೆ ಗಮನ ಹರಿಸಿಲ್ಲ. ಗದಗಿನ ಕಲ್ಲಯ್ಯಜ್ಜ ಅವರಿಗೆ ನಾಲ್ಕು ಬಾರಿ ತುಲಾಭಾರ ಸೇವೆ ಮಾಡಿ ಭಕ್ತಿ ಸಮರ್ಪಿಸಿದ್ದಾರೆ.

ರಂಗಭೂಮಿಯ ಅನುಪಮ ಗುರುತಿಸಿ ರಾಜ್ಯರ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ವಿವಿಧ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ನಾಟಕ ಪ್ರದರ್ಶನದ ಸಮಯದಲ್ಲಿ ಯಾರಾದರೂ ಪಾತ್ರಧಾರಿಗಳು ಕೈಕೊಟ್ಟರೆ ಪಾತ್ರ ನಿಭಾಯಿಸಲು ತುರ್ತಾಗಿ ಯಮನೂರಸಾಬರನ್ನು ಕರೆದುಕೊಂಡು ಹೋಗುತ್ತಿರುವುದು ಇಂದಿಗೂ ಇದೆ
ವಿರುಪಣ್ಣ ಕಲ್ಲೂರು ನಿಂಗಪ್ಪ ನಾಯಕ ಕಲಾವಿದ ನವಲಿ

ತಮ್ಮ ಬೆಳವಣಿಗೆಯಲ್ಲಿ ಎಚ್.ಎಂ.ಕೋಡಳ್ಳಿ ತೋಟಪ್ಪ ಕಿತ್ತೂರು ವಿರೂಪಾಕ್ಷಪ್ಪ ದುತ್ತರಗಿ ಇತರರ ಪಾತ್ರ ಹಿರಿದಾಗಿದೆ
ಯಮನೂರಸಾಬ್ ಕಲಾವಿದ

16 ಸಲ ಪ್ರದರ್ಶನ:

‘ಅಣ್ಣನ ಒಡಲು ಬಂಗಾರದ ಕಡಲು’ ನಾಟಕದ ಅಣ್ಣನ ಪಾತ್ರವು ಹೃದಯಂಗಮವಾಗಿ ಮೂಡಿಬಂದಿದೆ. ಒಟ್ಟು 16 ಸಲ ಈ ನಾಟಕ ಪ್ರದರ್ಶನಗೊಂಡಿದ್ದು ಜನಮನ ಸೂರೆಗೊಂಡಿದೆ. ಬೇರೆ ಊರುಗಳಲ್ಲಿ ಈ ನಾಟಕದ ಪ್ರದರ್ಶನ ನಡೆಯುತ್ತದೆ ಎಂದರೆ ಅಣ್ಣನ ಪಾತ್ರಕ್ಕೆ ಯಮನೂರಸಾಬ್ರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಕಲಾವಿದರಾದ ಪ್ಯಾಟೆಪ್ಪ ನಾಯಕ ವಿರುಪಣ್ಣ ಕಲ್ಲೂರು ನಿಂಗಪ್ಪ ಅವರು ಹೆಮ್ಮೆಯಿಂದ ಹೇಳುತ್ತಾರೆ. ‘ಬದುಕು ಒಂದು ಮೂರು ದಿನದ ಸಂತೆ’ ಎಂಬ ನಾಟಕ ಸಹ ಅನೇಕ ಭಾಗಗಳಲ್ಲಿ ಪ್ರದರ್ಶನಗೊಂಡಿರುವುದು ಇವರ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.