ಗಂಗಾವತಿ: ‘ತುಂಗಾಭದ್ರಾ ನದಿ ಹರಿವಿನ ಉದ್ದಕ್ಕೂ ಎಲ್ಲಿಯೂ ಚರಂಡಿ ನೀರು ಶುದ್ಧೀಕರಣ ವ್ಯವಸ್ಥೆ ಕಲ್ಪಿಸಿಲ್ಲ. ಎಲ್ಲಡೆಯಿಂದ ನದಿಗೆ ಕೊಳಚೆ ನೀರು ಹರಿಬಿಡುತ್ತಿದ್ದು ಇದೇ ಪರಿಸ್ಥಿತಿ ಮುಂದುವರಿದರೆ 2040ಕ್ಕೆ ನದಿ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪುತ್ತದೆ’ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ಅಭಿಪ್ರಾಯಪಟ್ಟರು.

ನಗರದ ಐಎಂಎ ಸಭಾಂಗಣದಲ್ಲಿ ಮಂಗಳವಾರ ನಿರ್ಮಲ ತುಂಗಾಭದ್ರ ಅಭಿಯಾನದಿಂದ ನಡೆದ ಶೃಂಗೇರಿಯಿಂದ ಕಿಷ್ಕಿಂಧೆ (ಗಂಗಾವತಿ) ತನಕ ನಡೆದ ಬೃಹತ್ ಜಲ ಮತ್ತು ಜನ ಜಾಗೃತಿ ಪಾದಯಾತ್ರೆಯ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದರು.

‘ಮೊದಲ ಹಂತವಾಗಿ ಶೃಂಗೇರಿಯಿಂದ ಹರಿಹರವರೆಗೆ 230 ಕೀ. ಮಿ, 2ನೇ ಹಂತವಾಗಿ ಹರಿಹರದಿಂದ ಕಿಷ್ಕಿಂಧಾ (ಗಂಗಾವತಿ)ವರೆಗೆ ನಿರ್ಮಲ ತುಂಗಾಭದ್ರ ಅಭಿಯಾನ ಮಾಡಿದ್ದು ಸಾಕಷ್ಟು ಜನ, ಸಂಘಟನೆಗಳ, ಪರಿಸರ ಪ್ರೇಮಿ, ಬುದ್ಧಿಜೀವಿಗಳ ಬೆಂಬಲ ಸಿಕ್ಕಿದೆ. ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಜನಜಾಗೃತಿ ಮೂಡಿಸಿರುವುದು ಖುಷಿಯ ಸಂಗತಿ. ಅಕ್ಟೋಬರ್ ಅಥವಾ ನವಂಬರ್ನಲ್ಲಿ 3ನೇ ಹಂತದ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಇದಕ್ಕೂ ಮುನ್ನ ನಿರ್ಮಲ ತುಂಗಾಭದ್ರ ಅಭಿಯಾನದ ಪದಾಧಿಕಾರಿಗಳು ಶೃಂಗೇರಿಯಿಂದ ಕಿಷ್ಕಿಂಧೆ (ಗಂಗಾವತಿ) ತನಕ ನಡೆದ ಬೃಹತ್ ಜಲ ಮತ್ತು ಜನ ಜಾಗೃತಿ ಪಾದಯಾತ್ರೆಯ ಸಮೀಕ್ಷಾ ವರದಿ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಸ್ವಾಭಿಮಾನದ ದಕ್ಷಿಣ ಭಾರತದ ಸಂಚಾಲಕ ಸಿ.ಪಿ ಮಾಧವನ್, ನಿರ್ಮಲ ತುಂಗಾಭದ್ರ ಅಭಿಯಾನದ ಸಂಚಾಲಕ ಎಂ.ಶಂಕರ, ಕೊಪ್ಪಳ ಜಿಲ್ಲಾ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ, ಸಂತೋಷ ಕೆಲೋಜಿ, ಜಗನ್ನಾಥ ಆಲಂಪಲ್ಲಿ, ಡಾ.ಎ.ಸೋಮರಾಜು, ಹಾಸ್ಯ ಭಾಷಣಕಾರ ಬಿ.ಪ್ರಾಣೇಶ, ರುದ್ರೇಶ ಆರ್ಹಾಳ, ರಾಘವೇಂದ್ರ ತೂನಾ, ಬಾಲಕೃಷ್ಣನಾಯ್ಡು, ಮಂಜುನಾಥ ಗುಡ್ಲಾನೂರ, ಅರ್ಜುನ, ಮಂಜುನಾಥ ಕಟ್ಟಿಮನಿ, ಪವನಕುಮಾರ, ರಾಘವೇಂದ್ರ ಚೌಡ್ಕಿ ಉಪಸ್ಥಿತರಿದ್ದರು.

‘ಎಲ್ಲರೂ ಆಸ್ಪತ್ರೆಗಳಿಗೆ ಸೇರಲಿದ್ದಾರೆ’

ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ.ಕುಮಾರಸ್ವಾಮಿ ಮಾತನಾಡಿ ‘2 ಹಂತಗಳ ನಿರ್ಮಲ ತುಂಗಾಭದ್ರ ಅಭಿಯಾನ 7 ಜಿಲ್ಲೆ 13 ತಾಲ್ಲೂಕು 120 ಗ್ರಾಮಗಳ ಮೂಲಕ 430 ಕೀ.ಮಿ ಸಾಗಿದೆ. 50 ಸಾವಿರ ಜನ 150 ಶಾಲೆ-ಕಾಲೇಜು 250 ಪರಿಸರ ಕಾಳಜಿ ಸಂಸ್ಥೆ 30 ಧಾರ್ಮಿಕ ಮಠಗಳು ಬೆಂಬಲಿಸಿ ಅಭಿಯಾನದಲ್ಲಿ ಪಾಲ್ಗೊಂಡಿವೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಹರಿಯುವ ದೊಡ್ಡ ನದಿ ತುಂಗಾಭದ್ರಾ. ನದಿಗೆ ಬಿಡುವ ಕಲುಷಿತ ನೀರು ಎಲ್ಲಿಯೂ ಶುದ್ಧಿಕರಣ ವಾಗದ ಕಾರಣ ನದಿ ಸಂಪೂರ್ಣ ಕಲುಷಿತವಾಗಿದೆ. ಸಾಕಷ್ಟು ಜನರು ನದಿ ನೀರು ಕುಡಿದು ರೋಗಗಳಿಗೆ ತುತ್ತಾಗಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಖಾಸಗಿ ಪ್ರಯೋಗಾಲಯ ನದಿ ನೀರು ಪರೀಕ್ಷೆ ಮಾಡಿದಾಗ ಪ್ರತಿ ಲೀಟರ್ ಕುಡಿಯುವ ನೀರಿನಲ್ಲಿ ಇರಬೇಕಾದ ಅಲ್ಯುಮಿನಿಯಂ ಪ್ರಮಾಣಕ್ಕಿಂತ 2ರಿಂದ 3 ಪಟ್ಟು ಹೆಚ್ಚಿದೆ. ನಿಖರವಾಗಿ ಪ್ರತಿ ಲೀಟರ್ ಕುಡಿಯುವ ನೀರಿನಲ್ಲಿ 0.2 ರಿಂದ 0.3 ಮಿಲಿ ಗ್ರಾಂ ಅಲ್ಯುಮಿನಿಯಂ ಇರಬೇಕು. ತುಂಗಾಭದ್ರಾನದಿ ಯಲ್ಲಿ 0.205 ಮಿಲಿ ಗ್ರಾಂ ಅಲ್ಯುಮಿನಿಯಂ ಇದೆ. ಮುಂದೆ ಎಲ್ಲರೂ ಆಸ್ಪತ್ರೆಗಳಿಗೆ ಸೇರಲಿದ್ದಾರೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.