ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು: ಮದ್ಯದ ಅಂಗಡಿ ತೆರೆಯದಂತೆ ಮಹಿಳೆಯರ ಒತ್ತಾಯ

Published 5 ಜುಲೈ 2024, 15:47 IST
Last Updated 5 ಜುಲೈ 2024, 15:47 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಗೊರ್ಲೆಕೊಪ್ಪ ಗ್ರಾಮದ ಸೀಮೆಯಲ್ಲಿ ಹೊಸದಾಗಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಪರವಾನಿಗೆದಾರರ ವಿರುದ್ಧ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ಬಾರ್ ತೆರೆಯುವುದನ್ನು ವಿರೋಧಿಸಿ ಇಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮಂಡಲಗೇರಿ ಗ್ರಾಮದಿಂದ ಗೊರ್ಲೆಕೊಪ್ಪ ಕಡೆಗೆ ಬರುವ ದಾರಿಯಲ್ಲಿ ಬಾರ್‌ ಹಾಕಲು ಕುಕನೂರು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಪರವಾನಿಗೆ ಪಡೆದಿದ್ದಾರೆ. ಆದರೆ ಗೊರ್ಲೆಕೊಪ್ಪದಂತ ಸಣ್ಣ ಹಳ್ಳಿಯ ಹತ್ತಿರ ಮದ್ಯದ ಅಂಗಡಿ ತೆರೆಯಲು ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ತೀವ್ರ ವಿರೋದ ವ್ಯಪಡಿಸಿರುವ ಗೊರ್ಲೆಕೊಪ್ಪ ಗ್ರಾಮದಲ್ಲಿ ಮಹಿಳೆಯರು, ‘ಯಾವುದೇ ಕಾರಣಕ್ಕೂ ನಮ್ಮ ಗ್ರಾಮದ ಸುತ್ತ ಎಲ್ಲಿಯೂ ಬಾರ್‌ ತೆರೆಯಲು ಬಿಡುವುದಿಲ್ಲ. ಅಧಿಕಾರಿಗಳೂ ಇದಕ್ಕೆ ಅವಕಾಶ ಮಾಡಿಕೊಡಬಾರದು. ಅಗತ್ಯ ಬಿದ್ದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ಪಾರಮ್ಮ ಪೊಲೀಸ್ ಪಾಟೀಲ, ಶಶಿಕಲಾ ಬಿನ್ನಾಳ, ರತ್ಮಮ್ಮ ಪಾಟೀಲ, ಗಂಗಮ್ಮ ಜೂಲ್ಪಿ, ಜಯಮ್ಮ ಹಿರೇಮಠ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT