ಕೊಪ್ಪಳ: ನಗರದ ರೈಲ್ವೆ ಸೇತುವೆ ನಂ. 63ರ ಕಾಮಗಾರಿ ಆರಂಭಿಸಿ ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜುಲೈ ತಿಂಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಗೇಟ್ ನಂ.63 ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ನಾಯಕ ತಿಳಿಸಿದರು.

‘2017ರಲ್ಲೇ ಸೇತುವೆ ಮಂಜೂರಾಗಿ ಕಾಮಗಾರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರು ಸಹ ಇಲ್ಲಿವರೆಗೆ ಕೆಲಸ ಮಂದಗತಿಯಲ್ಲಿ ಕಾರ್ಯಗಳು ನಡೆದ ಕಾರಣದಿಂದ ಜನರ ಓಡಾಟಕ್ಕೆ ತೀವ್ರ ಸಮಸ್ಯೆ ಆಗಿದೆ. ಈಗಾಗಲೇ ಭೂಸ್ವಾಧೀನಕ್ಕೆ ಅನುದಾನ ನೀಡಿದ್ದು ಸದ್ಯ ಹಳಿ ಕೆಳ ಭಾಗದಲ್ಲಿ ಅಳವಡಿಸುವ ಬಾಕ್ಸ್ಗಳು ಸಿದ್ಧಗೊಂಡಿವೆ. ಹೊಂದಿಸಿಟ್ಟಿದ್ದು, ಬಾಕಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ನಿರ್ಮಿಸಬೇಕಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಉಪಾಧ್ಯಕ್ಷ ಎಸ್.ಜಿ.ಹೊಸಭಾವಿ, ನಿವಾಸಿಗಳಾದ ಸೋಮನಗೌಡ ಪೊಲೀಸ್ ಪಾಟೀಲ್, ದುರುಗೇಶಪ್ಪ ಉರಿಗೆಜ್ಜಿ, ಆರ್.ಎಸ್.ಇನಾಮತಿ, ಪ.ಪಂ ಸದಸ್ಯ ರೋಷನ್ ಅಲಿ ಮಂಗಳೂರು ಮತ್ತು ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.