ಗಂಗಾವತಿ: ’ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇನೆ ಎನ್ನುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಟಿಪ್ಪುಸುಲ್ತಾನ್, ಔರಂಗಜೇಬನ ಸರ್ಕಾರವಾಗಿ ಮಾಡಿದ್ದಾರೆ. ಸರ್ಕಾರಕ್ಕೆ ಹಿಂದೂಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಮುಖ್ಯಮಂತ್ರಿ ಕಚೇರಿಯಲ್ಲಿ ಮುಸ್ಲಿಮರ ಆಡಳಿತ ನಡೆಯುತ್ತಿದೆ’ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ನಗರದ ಬಾಬು ಜಗಜೀವನರಾಂ ವೃತ್ತದಲ್ಲಿ ಮಂಗಳವಾರ ವಿಜಯವೃಂದ ಯುವಕ ಸಂಘದ ಗಣೇಶ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ಸಭೆಯಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿಗೆ ಮುಸ್ಲಿಮರ ಬಗ್ಗೆ ಮಾತ್ರ ಚಿಂತೆ, ಮಾಸಿಕ ಆರು ಸಾವಿರ, ವಿದೇಶಿ ಶಿಕ್ಷಣಕ್ಕೆ ₹30 ಲಕ್ಷ, 100 ಉರ್ದು ಶಾಲೆಗಳು, ಬೆಂಗಳೂರಿನಲ್ಲಿ ಹಜ್ ಭವನ, ಕ್ರೈಸ್ತರ ಅಭಿವೃದ್ಧಿಗೆ ₹250 ಕೋಟಿ ಹೀಗೆ ಹಿಂದೂಗಳಿಗೂ ಏನೂ ಇಲ್ಲದಂತೆ ಮಾಡುತ್ತಿದ್ದಾರೆ’ ಎಂದು ದೂರಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಸಿಂಗನಾಳ ವಿರೂಪಾಕ್ಷಪ್ಪ ಸೇರಿದಂತೆ ಅನೇಕರು ಇದ್ದರು. ಯತ್ನಾಳ ಭಾಷಣ ಕೇಳಲು ಅಪಾರ ಸಂಖ್ಯೆಯಲ್ಲಿ ಯುವಜನತೆ ನೆರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.