ಚಿಂತಕರ ಬಂಧನ ಖಂಡಿಸಿ ಪ್ರತಿಭಟನೆ

7

ಚಿಂತಕರ ಬಂಧನ ಖಂಡಿಸಿ ಪ್ರತಿಭಟನೆ

Published:
Updated:
Deccan Herald

ಮಂಡ್ಯ: ಮಾನವ ಹಕ್ಕು ಹೋರಾಟಗಾರರು, ಚಿಂತಕರು ಹಾಗೂ ಸಾಹಿತಿಗಳ ಬಂಧನ ಖಂಡಿಸಿ ಕರ್ನಾಟಕ ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಶನಿವಾರ ನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದಲಿತ ನಾಯಕರು, ಹೋರಾಟಗಾರರ ಮೇಲೆ ನಕ್ಸಲ್‌ ಚಟುವಟಿಕೆ ಆರೋಪ ಹೊರಿಸಿ ಬಂಧಿಸಲಾಗಿದೆ. ಹಲವು ಚಿಂತಕರ ನಿವಾಸಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಲಾಗಿದೆ. ಯಾವುದೇ ಸಾಕ್ಷಾಧಾರ ಇಲ್ಲದಿದ್ದರೂ ಚಿಂತಕರ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಗಳಿಗೆ ಅಹವಾಲು ಹೇಳಿಕೊಳ್ಳಲು ಅವಕಾಶವನ್ನೂ ನೀಡದೆ ಪ್ರಕರಣ ದಾಖಲು ಮಾಡಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿಯ ವಾತಾವರಣ ನೆಲೆಸಿದ್ದು ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಭಯಪಡಬೇಕಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ತನ್ನ ಅಜೆಂಡಕ್ಕೆ ಅನುಗುಣವಾಗಿ ಟೀಕಾಕಾರರ ಸದೆಬಡಿಯುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸದ್ಯ ಬಂಧನಕ್ಕೀಡಾಗಿರುವ ಹೋರಾಟಗಾರರ, ಚಿಂತಕರ ಹಿನ್ನೆಲೆ ಗಮನಿಸಿದರೆ ಅವರೆಲ್ಲರೂ ಜೀವನದುದ್ದಕ್ಕೂ ಯಾವ ರಾಜಕೀಯ ಪಕ್ಷಗಳ ಮುಲಾಜಿಗೂ ಒಳಗಾಗದೇ ಸರ್ಕಾರಗಳ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ ಮೋದಿ ಸರ್ಕಾರ ಧ್ವನಿ ಎತ್ತುವವರನ್ನು ಬಂಧಿಸುವ ಅಸ್ತ್ರ ಪ್ರಯೋಗ ಮಾಡುತ್ತಿದೆ. ದಮನಿತರ ಪರವಾಗಿ ಮಾತನಾಡುವ, ಸಂಘಟನೆ ಮಾಡುವ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು ಮಾಡುತ್ತಿರುವುದು ಖಂಡನೀಯ. ಸಂವಿಧಾನಿಕ ತತ್ವಗಳನ್ನು ಗಾಳಿಗೆ ತೂರಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಎನ್‌.ನಾಗೇಶ್‌, ಪೂರ್ಣಿಮಾ, ಸಂತೋಷ್‌, ರೈತ ನಾಯಕಿ ಸುನಂದಾ ಜಯರಾಂ, ಈಶ್ವರಿ, ಶ್ರೀನಿವಾಸ್‌, ಪ್ರಕಾಶ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !