ಮಂಡ್ಯ: ಗಿಡಮೂಲಿಕೆಗಳ ಮೂಲಕ ಆಯುರ್ವೇದ ಚಿಕಿತ್ಸೆ ನೀಡುವುದರಿಂದ ಮನುಷ್ಯನ ಆರೋಗ್ಯ ಕಾಪಾಡುವ ಉತ್ತಮ ಚಿಕಿತ್ಸೆಯಾಗಿದ್ದು ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಅನನ್ಯ ಹಾರ್ಟ್, ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆಯುರ್ವೇದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದೇಹದ ಸಮತೋಲನವನ್ನು ಕಾಪಾಡುವ ಮೂಲಕ ರೋಗಗಳನ್ನು ಗುಣಪಡಿಸಲು ಯುನಾನಿ ಒತ್ತು ನೀಡುತ್ತವೆ. ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸುಧಾರಿಸುವ ಶ್ರೇಷ್ಠ ಭಾರತೀಯ ಪದ್ಧತಿಯಾಗಿದೆ. ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡಿದೆ. ನ್ಯಾಚುರೋಪತಿಯು ಪ್ರಕೃತಿ ಚಿಕಿತ್ಸೆಯ ತತ್ವಗಳ ಮೇಲೆ ಆಧಾರಿತವಾಗಿದೆ. ದೇಹದ ಸ್ವ-ಉಪಶಮನ ಶಕ್ತಿಯನ್ನು ಉತ್ತೇಜಿಸಲು ಸಹಜ ವಿಧಾನಗಳನ್ನು ಬಳಸುತ್ತದೆ. ಸಿದ್ಧ ಎಂಬುದು ದಕ್ಷಿಣ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಆಯುರ್ವೇದಕ್ಕೆ ಹೋಲುತ್ತದೆ ಎಂದು ವಿವರಿಸಿದರು.

ಡಾ.ಲೋಕೇಶ್ ಮಾತನಾಡಿ, ಆಯುರ್ವೇದಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ನಾವು ಪ್ರತಿದಿನ ಆಯುರ್ವೇದ ಜೊತೆ ಬದುಕುತ್ತಿದ್ದೇವೆ, ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದ ಸಹಕಾರಿ ಆಗಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಡಾ.ಪ್ರಸನ್ನಕುಮಾರ್, ಡಾ.ಕುಸುಮಾ, ಡಾ.ಪ್ರವೀಣ್, ಡಾ.ಭಾಗ್ಯಲಕ್ಷ್ಮಿ, ಡಾ.ಶ್ರೀನಿವಾಸ್, ಅನನ್ಯ ಹಾರ್ಟ್ ಸಂಸ್ಥೆಯ ಬಿ.ಎಸ್.ಅನುಪಮಾ ಭಾಗವಹಿಸಿದ್ದರು.

‘ಆಯುರ್ವೇದ ದಿನ’ ಸೆ.23 ರಂದು

ಆಯುರ್ವೇದ ದಿನ ಆಚರಿಸಲಾಗುತ್ತದೆ. ಆಯುರ್ವೇದವು ಭಾರತೀಯ ವೈದ್ಯಪದ್ಧತಿಯಾಗಿದ್ದು ಇದರೊಂದಿಗೆ ಯುನಾನಿ ಯೋಗ ನ್ಯಾಚುರೋಪತಿ ಮತ್ತು ಸಿದ್ಧ ಚಿಕಿತ್ಸಾ ಪದ್ಧತಿಗಳು 'ಆಯುಷ್' ರೂಪದ ಅಡಿಯಲ್ಲಿ ಬರುತ್ತವೆ. ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವ ವಿಧಾನವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.