ಭತ್ತ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಖರೀದಿ ಕೇಂದ್ರ ಗುರುತಿಸಿದ್ದು ಶೀಘ್ರ ತೆರೆಯಲಾಗುವುದು. ರೈತರು ಆತಂಕ ಪಡುವುದು ಬೇಡ
–ಕುಮಾರ, ಜಿಲ್ಲಾಧಿಕಾರಿ
ನವೆಂಬರ್ ಕೊನೆಯಲ್ಲಿ ಸುಗ್ಗಿ ಆರಂಭವಾಗಿ ಬಹಳಷ್ಟು ರೈತರು ಈಗಾಗಲೇ ಭತ್ತ ಮಾರಿಕೊಂಡಿದ್ದಾರೆ. ಖರೀದಿ ಕೇಂದ್ರ ವಿಳಂಬವೇ ರೈತರು ನೋಂದಣಿಗೆ ನಿರಾಸಕ್ತಿ ತೋರಲು ಕಾರಣ
–ಎ.ಎಲ್.ಕೆಂಪೂಗೌಡ, ರೈತ ಮುಖಂಡ
ಭತ್ತ ಖರೀದಿ ಕೇಂದ್ರ ತೆರೆಯುವುದನ್ನು ಸರ್ಕಾರ ವಿಳಂಬ ಮಾಡುವ ಮೂಲಕ ರೈಸ್ ಮಿಲ್ ಮಾಲೀಕರಿಗೆ ಅನುಕೂಲ ಕಲ್ಪಿಸುವ ಹುನ್ನಾರ ನಡೆಸಿದೆ. ನಿಗದಿತ ವೇಳೆಯಲ್ಲಿ ಖರೀದಿ ಕೇಂದ್ರ ಆರಂಭವಾಗಿದ್ದರೆ ರೈತರಿಗೆ ಉತ್ತಮ ದರ ಸಿಗುತ್ತಿತ್ತು. ಎಂಎಸ್‌ಪಿ ದರ ಕ್ವಿಂಟಲ್‌ಗೆ ₹2300 ನಿಗದಿ ಮಾಡಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಕನಿಷ್ಠ ₹3,500 ನಿಗದಿಪಡಿಸಬೇಕು. ಭತ್ತ ಮಾರಿದ ನಂತರ ಸರ್ಕಾರದಿಂದ 6 ತಿಂಗಳಾದರೂ ಹಣ ಬಿಡುಗಡೆಯಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ರೈತರು ಎಂಎಸ್‌ಪಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.
–ಶಂಭೂನಹಳ್ಳಿ ಸುರೇಶ್, ರೈತ ಮುಖಂಡ
ಕನಿಷ್ಠ ಬೆಂಬಲ ಬೆಲೆ ₹2,300 ಇದ್ದರೂ, ದಲ್ಲಾಳಿಗಳು ಪ್ರತಿ ಕ್ವಿಂಟಲ್ ಭತ್ತಕ್ಕೆ ಕೇವಲ ₹1,800 ದರ ನಿಗದಿ ಮಾಡಿದ್ದಾರೆ. ಕೃಷಿ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ರೈತರ ಸಂಕಷ್ಟ ಅರಿತಿಲ್ಲ. ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಸುಮಾರು 50 ಲಕ್ಷ ಕ್ವಿಂಟಲ್ ಸಂಗ್ರಹವಾಗಿದೆ. ಆದರೆ ಖರೀದಿ ಕೇಂದ್ರವಿಲ್ಲದೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ
–ಎನ್.ಎಲ್. ಭರತ್‌ರಾಜ್, ಜಿಲ್ಲಾ ಸಂಚಾಲಕ, ಕರ್ನಾಟಕ ಪ್ರಾಂತ ರೈತ ಸಂಘ