ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅವಘಡ: ರೈತನಿಗೆ ₹2 ಲಕ್ಷ ಚೆಕ್ ವಿತರಿಸಿದ ಶಾಸಕ ಪುಟ್ಟಣ್ಣಯ್ಯ

Published 12 ಅಕ್ಟೋಬರ್ 2023, 15:23 IST
Last Updated 12 ಅಕ್ಟೋಬರ್ 2023, 15:23 IST
ಅಕ್ಷರ ಗಾತ್ರ

ಮೇಲುಕೋಟೆ: ವಿದ್ಯುತ್ ಶಾಕ್ ಸರ್ಕ್ಯೂಟ್ ಸಂಭವಿಸಿ ಮನೆ ಹಾಗೂ ಮನೆಯ ವಸ್ತುಗಳು ಸುಟ್ಟು ಕರಕಲಾದ ಹಿನ್ನಲೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರೈತ ಕುಟುಂಬಕ್ಕೆ ಪರಿಹಾರವಾಗಿ ಸರ್ಕಾರದಿಂದ ₹2 ಲಕ್ಷ ಚೆಕ್ ವಿತರಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಸಂದರ್ಭ ಲಕ್ಷ್ಮೀಸಾಗರ ಗ್ರಾಮದ ರೈತ ಪ್ರಕಾಶ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿದ್ಯುತ್ ಸರ್ಕ್ಯೂಟ್ ನಿಂದ ಮನೆ ಹಾಗೂ ಮನೆಯ ವಸ್ತುಗಳು ಸಂಪೂರ್ಣ‌‌ವಾಗಿ ನಾಶವಾಗಿದ್ದವು.

ಈ‌ ಹಿನ್ನಲೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಂಮುಡೇಶ್ವರಿ ವಿದ್ಯುತ್ ಸರಬರಾಜು ನಿಗಮದೊಂದಿಗೆ ಚರ್ಚಿಸಿ ರೈತ ಪ್ರಕಾಶ್ ಅವರಿಗೆ ಪರಿಹಾರವಾಗಿ ₹2 ಲಕ್ಷದ ಚೆಕ್ ವಿತರಿಸಿದರು.

ಈ‌ ಸಂಧರ್ಭದಲ್ಲಿ ಎಇಇ ವಿ ಪುಟ್ಟಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT