ಪಾಂಡವಪುರ: ‘ಸಂತ ಕನಕದಾಸರು ಸಾರಿದ ಸಮಾನತೆಯ ಸಂದೇಶ ಹಾಗೂ ಜಾತಿ ವಿರುದ್ಧದ ಪ್ರತಿರೋಧ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಿದೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಗುರುವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಕನಕದಾಸರ ಕೀರ್ತನೆಗಳು ಸಮಾಜದ ಬದಲಾವಣೆಗಳಿಗೆ ದಾರಿದೀಪವಾಗಿವೆ. ಜನರಲ್ಲಿದ್ದ ಮೌಢ್ಯತೆ, ಅಜ್ಞಾನ, ಅಸ್ಪ್ಯಶ್ಯತೆಯ ವಿರುದ್ಧವಾಗಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಬುದ್ಧ, ಬಸವಣ್ಣ, ಕನಕದಾಸರು ದೇಶದಲ್ಲಿನ ಜಾತಿ ವ್ಯವಸ್ಥೆಯ ಹೋಗಲಾಡಿಸಲು ಜನಾಂದೋಲನವನ್ನೇ ನಡೆಸಿದ್ದಾರೆ. ಈ ಆಂದೋಲನ ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶನವಾಗಬೇಕು. ಇಂದಿನ ಯುವ ಸಮುದಾಯವು ಜಾಗೃತಿಗೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

ತಹಶೀಲ್ದಾರ್ ಶ್ರೇಯಸ್ ಮಾತನಾಡಿ, ‘ಕರ್ನಾಟಕದಲ್ಲಿ ನಡೆದ ವಚನ ಚಳವಳಿ, ಭಕ್ತಿಪಂಥ ಚಳವಳಿಗಳು ಜಾತಿ ವ್ಯವಸ್ಥೆಯ ವಿರುದ್ಧ ನಡೆಸಿದ ಹೋರಾಟ, ಮೌನವೀಯ ಮೌಲ್ಯಗಳು ಪ್ರಮುಖವಾದುದು. ಈ ನಿಟ್ಟಿನಲ್ಲಿ ಕನಕದಾಸರ ದಾಸ ಶ್ರೇಷ್ಠತೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಸ್ತುತ ಸಮಾಜಕ್ಕೆ ಇಂತಹ ಮಹಾತ್ಮರ ಸಂದೇಶಗಳು ನಮಗೆ ದಾರಿದೀಪವಾಗಲಿವೆ’ ಎಂದು ಹೇಳಿದರು.

ಪ್ರಾಧ್ಯಾಪಕ ರಾಜೇಶ್ ಪ್ರಧಾನ ಭಾಷಣ ಮಾಡಿದರು.

ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ತಾ.ಪಂ ಇಒ ಲೋಕೇಶ್ ಮೂರ್ತಿ, ಬಿಇಒ ಬಿ.ಚಂದ್ರಶೇಖರ್, ಬಿಆರ್‌ಸಿ ಪ್ರಕಾಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್, ಕುರುಬರ ಸಂಘದ ಗೌರವ ಅಧ್ಯಕ್ಷ ಸ್ವಾಮೀಗೌಡ, ಅಧ್ಯಕ್ಷ ಡಿ.ಹುಚ್ಚೇಗೌಡ, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಜಯಲಕ್ಷ್ಮಿ, ಮುಖಂಡರಾದ ಮಲ್ಲೇಶ್, ಗೋಪಾಲ್, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.