ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೌಹಾರ್ದತೆಯ ನೆಲೆವೀಡು: ಶಾಸಕ ರಮೇಶ ಬಂಡಿಸಿದ್ದೇಗೌಡ

Published 1 ನವೆಂಬರ್ 2023, 13:23 IST
Last Updated 1 ನವೆಂಬರ್ 2023, 13:23 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಬಹು ಭಾಷಿಕರು ನೆಲೆಸಿರುವ ಕರ್ನಾಟಕ ಸೌಹಾರ್ದತೆಯ ನೆಲೆವೀಡಾಗಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಬಣ್ಣಿಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಬುಧವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡಿಗರ ಜತೆಗೆ ಅನ್ಯ ಭಾಷಿಕರು ಸಹೋದರರಂತೆ ಬಾಳ್ವೆ ನಡೆಸುತ್ತಿದ್ದಾರೆ. ಇದು ಕನ್ನಡಿಗರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಕನ್ನಡ ಭಾಷಿಕರು ತಮ್ಮ ಮಾತೃ ಭಾಷೆಯನ್ನು ಪ್ರೀತಿಸಬೇಕು; ಅನ್ಯ ಭಾಷೆಗಳನ್ನು ಗೌರವಿಸಬೇಕು. ಇತರ ಭಾಷೆಗಳಲ್ಲಿರುವ ಉತ್ತಮ ಅಂಶಗಳನ್ನು ಕನ್ನಡಕ್ಕೆ ತಂದು ನಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಬಂದಿರುವುದು ನಮ್ಮ ಹೆಗ್ಗಳಿಕೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಮಂಡ್ಯ ಸರ್ಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಂ.ವೈ. ಶಿವರಾಮು, ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಹಿರಿಮೆ ಕುರಿತು ಮಾತನಾಡಿದರು. ತಹಶೀಲ್ದಾರ್ ಜಿ. ಅಶ್ವಿನಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರ ಶಿಕಷಣಾಧಿಕಾರಿ ಎಂ.ಆರ್‌. ಅನಂತರಾಜು ಪ್ರಾಸ್ತಾವಿಕ ಮಾತುಗಳಾಡಿದರು.

ಪುರಸಭೆ ಮುಖ್ಯಾಧಿಕಾರಿ ರಾಣಿ, ಸದಸ್ಯರಾದ ದಯಾನಂದ್‌, ವಸಂತಕುಮಾರಿ ಲೋಕೇಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್‌. ಲೋಕೇಶ್‌, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಮಂಜುನಾಥ್‌, ನಗರ ಘಟಕದ ಅಧ್ಯಕ್ಷೆ ಎನ್‌. ಸರಸ್ವತಿ, ಎಇಇ ರಾಮಕೃಷ್ಣೇಗೌಡ, ಸಿ. ಸ್ವಾಮಿಗೌಡ, ಎಂ. ಸುರೇಶ್‌, ಅರಕೆರೆ ರಾಮಕೃಷ್ಣ, ಅಪೆಕ್ಸ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಶಿವಯ್ಯ, ಪ್ರಿಯಾ ರಮೇಶ್‌ ಇದ್ದರು.

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಕಚೇರಿಯಿಂದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಕನ್ನಡ ತೇರನ್ನು ಎಳೆದರು. ಫ್ರಾನ್ಸ್‌ ದೇಶದ ಇಬ್ಬರು ಮಹಿಳೆಯರಾದ ಸಿಂತೆನ್‌ ಮತ್ತು ಫತೀಸಾ ಕೂಡ ಕನ್ನಡ ತೇರು ಎಳೆದು ಗಮನ ಸೆಳೆದರು.

ಪ್ರಶಸ್ತಿ ಪ್ರದಾನ: ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌, ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಪತ್ರಕರ್ತ ಎಂ.ಸಿ. ಪ್ರಕಾಶ್‌, ಶಿಕ್ಷಕ ಚ. ನಾರಾಯಣಸ್ವಾಮಿ, ಶಿಕ್ಷಕಿ ಧನಲಕ್ಷ್ಮಿ, ಕ್ರೀಡಾ ತರಬೇತುದಾರ ಆರ್‌. ರಾಘವೇಂದ್ರ, ರಾಷ್ಟ್ರ ಮಟ್ಟದ ಕ್ರೀಡಾಪಟು ಎಸ್‌. ಲೇಖನ, ಪ್ರಗತಿಪರ ರೈತ ಜಕ್ಕನಹಳ್ಳಿ ನಾಗರಾಜು, ಕನ್ನಡಪರ ಹೋರಾಟಗಾರರಾದ ಚಂದಗಾಲು ಶಂಕರ್‌, ಬಿ. ಶಂಕರಬಾಬು, ಬಿಎಂಎಸ್‌ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ವಾಸುದೇವ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಬೆನ್ನೂರ, ಆಲದಹಳ್ಳಿ ಪ್ರೇಮ ಅವರಿಗೆ ತಾಲ್ಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರದಾನ ಮಾಡಿದರು.

[object Object]
ಶ್ರೀರಂಗಪಟ್ಟಣದ ಮುಖ್ಯ ಬೀದಿಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ತೇರನ್ನು ಎಳೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT