ಕಿಕ್ಕೇರಿ: ‘ತನ್ನ ಪತಿ ಜನಾರ್ಧನಗೌಡ(ಜಾನು) ಅಗಲಿ ಮೂರು ವರ್ಷಗಳಾಗುತ್ತಿದ್ದು ಸರ್ಕಾರ ನೀಡಿದ ಭರವಸೆಗಳು ಹುಸಿಯಾಗಿವೆ’ ಎಂದು ಮೃತ ಯೋಧ ಜನಾರ್ಧನಗೌಡ ಪತ್ನಿ ರಂಜಿತಾ ಕಂಬನಿ ಮಿಡಿದರು.

ಪಟ್ಟಣದಲ್ಲಿ ಮೃತ ಯೋಧ ಜನಾರ್ಧನಗೌಡ ಅವರ ನೆನಪಿನಲ್ಲಿ ಅವರ ಸ್ನೇಹಿತ ಬಳಗದ ಕಿಕ್ಕೇರಮ್ಮ ಷಟಲ್ ಕಾಕ್ ಕ್ಲಬ್, ಗ್ರಾಮಸ್ಥರ ಸಹಕಾರದಲ್ಲಿ ಯೋಧನ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿದ ಸಂದರ್ಭ ಅಳಲು ತೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಅವರು ತಮ್ಮ ಪತಿ ಮೃತರಾದ ವೇಳೆ ಶವಸಂಸ್ಕಾರಕ್ಕೆ ಸರ್ಕಾರಿ ಮಾರ್ಯದೆ ಸಲ್ಲಿಸಿದರು. ಸ್ಥಳೀಯ ಮುಖಂಡರಿಂದ ಹಿಡಿದು ಎಲ್ಲರೂ ಉದ್ಯೋಗ ಕೊಡಿಸುವ ಮತ್ತಿತರ ಭರವಸೆ ದಂಡಿಯಾಗಿ ನೀಡಿದರು. ಎಲ್ಲವೂ ಸಿಗಲಿದೆ ಎಂದು ಸಮಧಾನವಿತ್ತು. ಇತ್ತ ಯಾರೂ ಸುಳಿಯಲೇ ಇಲ್ಲ. ಈಗ ಹಲವರು ಬಂದಿದ್ದಾರೆ, ನೀಡಿದ ಭರವಸೆ ಮರೆತಂತಿದೆ’ ಎಂದರು.

‘ನನಗೆ ಇಬ್ಬರು ಮಕ್ಕಳಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಭರವಸೆಗಳಲ್ಲಿ ತನಗೆ ನಂಬುಗೆ ಇಲ್ಲವಾಗಿದ್ದು, ಯೋಧರ ಕುಟುಂಬವನ್ನು ಇಂದಿನ ವ್ಯವಸ್ಥೆ ನಡೆಸಿಕೊಳ್ಳುವ ರೀತಿ ಬೇಸರವಾಗಿದೆ’ ಎಂದರು.

ಕೆಪಿಸಿಸಿ ಸದಸ್ಯ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಪ್ರಭಾಕರ್, ಕ್ಲಬ್ ದಿನೇಶ್ಬಾಬು, ಕೇಶವಮೂರ್ತಿ, ಕುಮಾರಸ್ವಾಮಿ, ಕೆ.ಪಿ. ಮಧುಕರ್, ಮಂಜುನಾಥ್, ಬೇಲೂರೇಗೌಡ, ಎಲ್.ಎಸ್. ಧರ್ಮಪ್ಪ, ಹೈಕೋರ್ಟ್ ಅಪರ ಸರ್ಕಾರಿ ವಕೀಲ ಕೆ.ಪಿ. ಯೋಗಣ್ಣ, ಎಸ್ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಟಿಎಪಿಎಂಸಿ ಸದಸ್ಯ ಕೆ.ಬಿ. ಮಧು, ಮಾಜಿ ಯೋಧರಾದ ಲೋಕೇಶ್, ದಾಸಪ್ಪಶೆಟ್ಟಿ, ಯೋಧನ ತಂದೆ ಭಾರತೀ ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಕೆ.ವಿ. ಅರುಣಕುಮಾರ್, ಕೆ.ಟಿ. ಪರಮೇಶ್, ಸಹೋದರ ಕೆ.ಪಿ. ಮಹೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.