ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್ ಪೇಟೆ |ವೃದ್ಧೆಗೆ ಪಿಂಚಣಿ ಬಂದ್ : ಕ್ರಮಕ್ಕೆ ಆಗ್ರಹ

Published 1 ಜೂನ್ 2024, 14:22 IST
Last Updated 1 ಜೂನ್ 2024, 14:22 IST
ಅಕ್ಷರ ಗಾತ್ರ

ಕೆ.ಆರ್ ಪೇಟೆ: ಬದುಕಿದ್ದ ವೃದ್ದೆಯೊಬ್ಬರನ್ನು ಸತ್ತಿದ್ದಾರೆಂದು ದಾಖಲಿಸಿ, ಪಿಂಚಣಿ ಹಣ ಸ್ಥಗಿತಗೊಳ್ಳುವಂತೆ ಮಾಡಿರುವವರ ವಿರುದ್ದ ಕ್ರಮ ಜರುಗಿಸುವಂತೆ ರಾಜ್ಯ ರೈತಸಂಘ ಆಗ್ರಹಿಸಿದೆ.

 ಕಿಕ್ಕೇರಿ ಹೋಬಳಿಯ ಉದ್ದಿನ ಮಲ್ಲನ ಹೊಸೂರು ಗ್ರಾಮದ ದಿವಂಗತ ನಂಜೇಗೌಡರ ಪತ್ನಿ ಲಕ್ಷ್ಮಮ್ಮ(83) ಅಂಗವಿಕಲೆಯಾಗಿದ್ದು ಇಂದಿರಾ ಗಾಂಧಿ ಪಿಂಚಿಣಿ ಯೋಜನೆಯಡಿ  ಮಾಸಿಕ ಪಿಂಚಣಿ ಬರುತ್ತಿತ್ತು. ಆದರೆ , ಗ್ರಾಮ ಆಡಳಿತ ಅಧಿಕಾರಿ ಪರಿಶೀಲನೆ ನಡೆಸದೆ ಲಕ್ಷ್ಮಮ್ಮ ಅವರು ನಿಧನರಾಗಿದ್ದಾರೆಂದು ವರದಿ ದಾಖಲಿಸಿದ ಪರಿಣಾಮ 2023  ಸೆಪ್ಟೆಂಬರ್‌ ನಿಂದ ಪಿಂಚಿಣಿ ಸ್ಥಗಿತಗೊಂಡಿದೆ ಎಂದು ರೈತರು ದೂರಿದರು.

‘ ವೃದ್ದೆ ತಾಲ್ಲೂಕು ಕಚೇರಿಗೆ ಬಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರೈತಸಂಘದ ಮುಖಂಡರು ವೃದ್ದೆಯ ದಾಖಲೆ ಪರಿಶೀಲಿಸಿದಾಗ ವೃದ್ದೆ ಮರಣ ಹೊಂದಿರುವ ಬಗ್ಗೆ ಆ ಭಾಗದ ಗ್ರಾಮ ಆಡಳಿತ ಅಧಿಕಾರಿ(ವಿಎ) ವರದಿ ನೀಡಿರುವುದು ಬೆಳಕಿಗೆ ಬಂದಿದೆ. ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದ ರೈತಸಂಘದ ನಿಯೋಗ ತಹಶೀಲ್ದಾರ್ ಲೋಕೇಶ್ ಅವರನ್ನು ಭೇಟಿ ಮಾಡಿ ನೈಜಸ್ಥಿತಿ ತಿಳಿಸಿದಾಗ , ಸಮಸ್ಯೆ ಆಲಿಸಿದ ತಹಶೀಲ್ದಾರ್,  ಸೂಕ್ತ ಕ್ರಮ ವಹಿಸುವದಲ್ಲದೆ , ವೃದ್ದೆಗೆ ಪಿಂಚಣಿ ಹಣವನ್ನು ಮರು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.

Cut-off box -  ‘10 ರಂದು ಧರಣಿ’ ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾಹಿತಿ ನೀಡಿ ವಯೋವೃದ್ಧೆ ಲಕ್ಷ್ಮಮ್ಮ ಅವರಿಗೆ ರದ್ದು ಮಾಡಿರುವ ಪಿಂಚಿಣಿ ಹಣವನ್ನು ಮರು ಜಾರಿಗೊಳಿಸಿದರೆ ಸಾಲದು ಆಕೆಯ ಸಂಕಷ್ಟಕ್ಕೆ ಕಾರಣಕರ್ತ  ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೇವೆಯಿಂದಲೇ ವಜಾಗೊಳಿಸಬೇಕು. ಮರಣ ಪ್ರಮಾಣ ಪತ್ರವಿಲ್ಲದೆ  ಪಿಂಚಣಿ ರದ್ದು ಮಾಡಿದ ಬಗ್ಗೆ ಸಮಗ್ರ ತನಿಖೆಯಾಗಬೇಕು.   ಕಂದಾಯ ಇಲಾಖೆಯ ಕಾರ್ಯ ವೈಖರಿಯನ್ನು ವಿರೋಧಿಸಿ ಜೂನ್ 10 ನೇ ಸೋಮುವಾರ ಮಿನಿ ವಿದಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT