ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ದೂರು: ಇಬ್ಬರ ಬಂಧನ, 30 ಜಾನುವಾರು ರಕ್ಷಣೆ

ಮೈಸೂರು ಭಾಗದಿಂದ ಬೆಂಗಳೂರು ಕಡೆಗೆ ಸಾಗಿಸುತ್ತಿದ್ದ ವಾಹನ
Published : 4 ಸೆಪ್ಟೆಂಬರ್ 2024, 14:06 IST
Last Updated : 4 ಸೆಪ್ಟೆಂಬರ್ 2024, 14:06 IST
ಫಾಲೋ ಮಾಡಿ
Comments

ಮದ್ದೂರು: ಹಿಂದೂಪರ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ತಂಡ ಪಟ್ಟಣದಲ್ಲಿ ಬುಧವಾರ ಸರಕು ವಾಹನೊಂದನ್ನು ತಡೆದು ಅಕ್ರಮವಾಗಿ ಕಸಾಯಿಖಾನೆಗೆ  ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿ ವಾಹನ ಸಹಿತ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ನಸುಕಿನ 5.45 ರ ಸಂದರ್ಭದಲ್ಲಿ ಐಷರ್ ಸರಕು ಸಾಗಣೆ ವಾಹನದಲ್ಲಿ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ  ಪುನೀತ್ ಕೆರೆಹಳ್ಳಿ ಹಾಗೂ ಅವರ ತಂಡದವರು ವಾಹನವನ್ನು ಪಟ್ಟಣದ ಪ್ರವಾಸಿ ಮಂದಿರದ ಬಳಿ  ನಿಲ್ಲಿಸಿದ್ದರು.

 ಪೊಲೀಸ್ ಠಾಣೆಗೆ ವಿಷಯ ತಿಳಿಸಿದಾಗ ಸಿಪಿಐ ಶಿವಕುಮಾರ್ ಹಾಗೂ ಸಿಬ್ಬಂದಿ ಬಂದು ವಾಹನವನ್ನು ವಶಕ್ಕೆ ಪಡೆದು, ವಾಹನದ ಚಾಲಕ ಮನ್ಸೂರ್ ಹಾಗೂ ಕ್ಲೀನರ್ ಲೋಕೇಶ್ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ.

ವಶಕ್ಕೆ ಪಡೆಯಲಾದ ಸರಕು ಸಾಗಣೆ ವಾಹನ
ವಶಕ್ಕೆ ಪಡೆಯಲಾದ ಸರಕು ಸಾಗಣೆ ವಾಹನ
ವಶಕ್ಕೆ ಪಡೆಯಲಾದ ಸರಕು ಸಾಗಣೆ ವಾಹನ
ವಶಕ್ಕೆ ಪಡೆಯಲಾದ ಸರಕು ಸಾಗಣೆ ವಾಹನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT