ಮಳವಳ್ಳಿ: ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವುದು ಬಿಜೆಪಿಯ ಗುಣ’ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಬಜೆಟ್ ಕುರಿತ ಬಿಜೆಪಿಯವರ ಟೀಕೆಗೆ ತಿರುಗೇಟು ನೀಡಿದರು.

ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಬಿಜೆಪಿಯವರು ಅಂಬಾನಿ, ಆದಾನಿ ಗಿರಾಕಿಗಳು. ಅವರಿಗೆ ಅವರಿಗೆ ಧರ್ಮಾಧಾರಿತವಾಗಿ ಮಾತನಾಡುವುದನ್ನು ಬಿಟ್ಟರೆ ವಿಷಯ ಮತ್ತು ಅಭಿವೃದ್ಧಿ ಬರುವುದಿಲ್ಲ. ಯಾವ ವರ್ಗವನ್ನೂ ಅವರು ಪ್ರೀತಿಸಿದವರಲ್ಲ. ಧರ್ಮದ ಹೆಸರಿನಲ್ಲಿ ರಾಷ್ಟ್ರದ ಹೊಡೆಯಲು ವಿಷಯವೇ ಇಲ್ಲದ ಬಗ್ಗೆ ಪ್ರತಿಭಟನೆ ಮಾಡುತ್ತಾರೆ. ಇದು ಅವರ ಬೌದ್ಧಿಕ ಮಟ್ಟ ತೋರಿಸುತ್ತದೆ. ಅವರ ಟೀಕೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ’ ಎಂದರು.

ಬಜೆಟ್ನಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂಬ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ‘ಪರಿಶಿಷ್ಟ ಜನಾಂಗಕ್ಕೆ ವಾರಸುದಾರರಾಗಲು ಸಾಧ್ಯವಿಲ್ಲ. ಮಾತಿನಲ್ಲಿ ಇತಿಮಿತಿ ಇಟ್ಟುಕೊಂಡು ಮಾತನಾಡಬೇಕು. ಮೇಲ್ಮನೆ ವಿರೋಧ ಪಕ್ಷದ ನಾಯಕನಾಗಿ ಮಾಡಿರುವುದರಿಂದ ಅವರು ಸಿದ್ಧಾಂತಗಳನ್ನು ಬದಲಾಯಿಸಿಕೊಂಡು ಮಾತನಾಡುತ್ತಿದ್ದಾರೆ. ಅವಕಾಶಕ್ಕಾಗಿ ಸಿದ್ಧಾಂತ ಬದಲಾಯಿಸಿಕೊಂಡವರ ಪ್ರಶ್ನೆಗೆ ಉತ್ತರ ಕೊಡಬೇಕಾಗಿಲ್ಲ’ ಎಂದು ಹೇಳಿದರು.

ಭಾನುವಾರ ಪಟ್ಟಣಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ಬೈಕ್ ರ್ಯಾಲಿ ಸ್ವಾಗತಿಸಲಾಯಿತು.

ಮನ್ಮುಲ್ ನಿರ್ದೇಶಕ ಆರ್.ಎನ್. ವಿಶ್ವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ. ಚೌಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ವಡ್ಡರಹಳ್ಳಿ ಶ್ರೀಕಾಂತ್, ನಿಕಟಪೂರ್ವ ಅಧ್ಯಕ್ಷ ಎಚ್.ಕೆ. ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಎಂ.ಎನ್. ಶಿವಸ್ವಾಮಿ, ಎಂ.ಆರ್. ರಾಜಶೇಖರ್ ಮುಖಂಡರಾದ ಸಿ.ಮಾಧು, ಪುಟ್ಟಸ್ವಾಮಿ, ಮುಟ್ಟನಹಳ್ಳಿ ಅಂಬರೀಶ್, ರೋಹಿತ್ ಗೌಡ, ಮಹೇಶ್, ಎಂ.ಎಲ್.ಚೌಡಪ್ಪ, ಸಾಹಳ್ಳಿ ಶಶಿ, ದಿಲೀಪ್ ಕುಮಾರ್, ಜಲ್ಲಿ ಚನ್ನಪ್ಪ, ಸಿದ್ದರಾಜು ಇದ್ದರು.

ಇದೇ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಚೊಟ್ಟನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಿ.ಎಸ್.ಸಿದ್ದರಾಜು (ಸಿಮೆಂಟ್ ಸಿದ್ದು) ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.