ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆ ಇರುವವರು ಕಾಂಗ್ರೆಸ್‌ಗೆ ಹೋಗಲ್ಲ: ಸಿ.ಟಿ.ರವಿ

Published 22 ಆಗಸ್ಟ್ 2023, 14:52 IST
Last Updated 22 ಆಗಸ್ಟ್ 2023, 14:52 IST
ಅಕ್ಷರ ಗಾತ್ರ

ಮಂಡ್ಯ: ‘ಕಾಂಗ್ರೆಸ್‌ನವರು ಯಾರನ್ನೂ ಮರ್ಯಾದೆ ಕೊಟ್ಟು ಕರೆದುಕೊಳ್ಳುತ್ತಿಲ್ಲ, ಬಂದವರು ಕಡೆಯ ಬೆಂಚ್‌ನಲ್ಲಿ ಕೂರಬೇಕಾಗುತ್ತದೆ ಎಂದು ಮುಖಂಡರೇ ತಿಳಿಸಿದ್ದಾರೆ. ಹೀಗಿರುವಾಗ ಮರ್ಯಾದೆ ಇರುವವರು ಯಾರೂ ಅಲ್ಲಿಗೆ ಹೋಗುವುದಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ‌ಮಾತನಾಡಿ, ‘ನಾವು ಬಿ.ಎಸ್‌.ಯಡಿಯೂರಪ್ಪ ಅವರನ್ನು ನೋಡಿ ಪಕ್ಷಕ್ಕೆ ಬಂದವರು. ಪಕ್ಷವನ್ನು ಉಳಿಸಿಕೊಂಡು ಹೋಗುತ್ತೇವೆ. ಕಾಂಗ್ರೆಸ್‌ ಸೇರ್ಪಡೆ ಎಂಬುದು ಸುಳ್ಳುಸುದ್ದಿ ಎಂದು ಮುನಿರತ್ನ, ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ’ ಎಂದರು.

‌‘ನೀವೇ ಪಾದಯಾತ್ರೆ ಮಾಡಿ, ತಮಿಳುನಾಡಿಗೆ ನೀರನ್ನೂ ಬಿಟ್ಟಿದ್ದೀರಿ. ನಿಮ್ಮದು ನವರಂಗಿ ಆಟ ತಾನೆ? ಐಎನ್‌ಡಿಐಎ (ಇಂಡಿಯಾ) ಸಮಾಧಾನಕ್ಕಾಗಿ ನೀರು ಬಿಡುತ್ತಿದ್ದು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಸ್ನೇಹಕ್ಕೆ ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್‌ ಸರ್ಕಾರವು ಮಂಡ್ಯ ಜನರಿಗೆ ಶಾಪ, ತಮಿಳುನಾಡಿಗೆ ವರವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT