ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ ಕುಟುಂಬಗಳಿಗೆ ನೆರವಾಗಿದ್ದ ಪುನೀತ್‌’: ಶ್ರದ್ಧಾಂಜಲಿ

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಸಹಯೋಗದಲ್ಲಿ ಶ್ರದ್ಧಾಂಜಲಿ
Last Updated 8 ನವೆಂಬರ್ 2021, 5:44 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಧನ ಸಹಾಯ ಮಾಡಿದ ಹೃದಯವಂತ ನಟ ಪುನೀತ್‌ ರಾಜ್‌ಕುಮಾರ್‌ ಎಂದು ಸಾಹಿತಿ ಜಿ.ಟಿ.ವೀರಪ್ಪ ಸ್ಮರಿಸಿದರು.

ನಗರದ ಗಾಂಧಿ ಭವನದಲ್ಲಿ ಡಿ.ದೇ ವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಸಹಯೋಗದಲ್ಲಿ ಪುನೀತ್‌ ರಾಜ್‌ಕುಮಾರ್ ಶ್ರದ್ಧಾಂಜಲಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಅಪ್ಪನಂತೆ ಅಪ್ಪು’ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುನೀತ್‌ ಅವರಲ್ಲಿ ತಂದೆಯ ಅನುವಂಶೀಯ ಗುಣವಿದ್ದಂತೆ ಕಾಣುತ್ತದೆ. ಅದಕ್ಕಾಗಿಯೇ ಅವರು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ತಿಳಿಸಿಕೊಟ್ಟರು. ಒಬ್ಬ ಮೇರು ಕಲಾವಿದನ ಮಗ, ಮೇರು ನಟನಾಗಿ ಪುನೀತ್‌ ಹೊರಹೊಮ್ಮಿದ್ದರು. ಹಿರಿ ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ಗೌರವ ಪೂರ್ವಕವಾಗಿ ಕಾಣುವ ಹೃದಯ ಶ್ರೀಮಂತಿಕೆ ಅವರಲ್ಲಿ ಇತ್ತು ಎಂದರು.

ಜಿಲ್ಲೆಯಲ್ಲೂ ರೈತರ ಪರವಾಗಿ ನಿಂತ ಪುನೀತ್‌ ಅವರು ರೈತರು ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ರೈತರ ಕುಟುಂಬಗಳಿಗೆ ಧನ ಸಹಾಯ ಮಾಡುವ ಮೂಲಕ ಸಾಂತ್ವನ ಹೇಳಿದ್ದರು. ಕೋವಿಡ್‌ ಸಮಯದಲ್ಲಿಯೂ ರಾಜ್ಯ ಸರ್ಕಾರಕ್ಕೆ ₹ 50 ಲಕ್ಷ ಕೊಟ್ಟು ನೆರವಾಗಿದ್ದರು. ಕಾರ್ಮಿಕರಿಗೆ, ಬಡವರಿಗೆ ನೆರವು ನೀಡಿದ್ದರು ಎಂದು ಸ್ಮರಿಸಿದರು.

ಸಾಹಿತಿ ಮೃತ್ಯುಂಜಯ ಮಾತನಾಡಿ, ಜಾತಿ, ಮತ, ಧರ್ಮವನ್ನು ಮೀರಿ ಬೆಳೆದ ವ್ಯಕ್ತಿ ಪುನೀತ್‌ ರಾಜ್‌ಕುಮಾರ್‌ ಅವರು, ರಾಜ್ಯದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಪುನೀತ್‌ ನಡೆದು ಬಂದ ದಾರಿ ಎಲ್ಲರಿಗೂ ದಾರಿದೀ ಪವಾಗಬೇಕು ಎಂದು ತಿಳಿಸಿದರು.

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಂದೇಶ್‌ ಮಾತನಾಡಿ, ರಾಜ್‌ಕುಮಾರ್‌ ಅವರು ರಾಜಕೀಯದಿಂದಲೇ ದೂರ ಇದ್ದರು. ತಂದೆಯ ದಾರಿಯನ್ನೇ ಅನುಸರಿಸಿದ ಪುನೀತ್‌ ಅವರು, ಅಣ್ಣ ಶಿವರಾಜ್‌ ಕುಮಾರ್ ಅವರ ಹೆಂಡತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಆ ರಾಜಕೀಯ ಪ್ರಚಾರಕ್ಕೆ ಹೋಗದೆ ದೂರ ಉಳಿದಿದ್ದರು ಎಂದರು.

ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಎಲ್‌.ಕೃಷ್ಣ, ಮುಖಂಡರಾದ ಬಿ.ಎಂ.ಅಪ್ಪಾಜಪ್ಪ, ಕರವೇ ಜಯರಾಂ, ಮಾ.ಸೋ.ಚಿದಂಬರ್, ನಾಗರಾಜು, ಹನಿಯಂಬಾಡಿ ನಾಗರಾಜು, ಮಹಂತಪ್ಪ, ರಾಜ್‌ಕುಮಾರ್, ಹುರುಗಲವಾಡಿ ರಾಮಯ್ಯ, ಲತಾ ಶಂಕರ್, ಬಿ.ಎಸ್.ಅನುಪಮಾ, ರತ್ನಮ್ಮ, ಸತೀಶ್, ರೇಖಾ, ತ್ಯಾಗರಾಜು, ಮಂಗಲ ಯೋಗೇಶ್, ಸಿದ್ದಶೆಟ್ಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT