ಮಳವಳ್ಳಿ: ಪರಿಶಿಷ್ಟ ಜಾತಿಯೊಳಗೆ ಎಡಗೈ ಸಮುದಾಯಕ್ಕೆ ನೀಡಿರುವ ಮೀಲಾಸತಿಯನ್ನು ಪರಿಷ್ಕರಿಸಿ ಶೇ7ಕ್ಕೆ ಹೆಚ್ಚಿಸಬೇಕು ಎಂದು ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜು ಆಗ್ರಹಿಸಿದರು.

ಒಳ ಮೀಸಲಾತಿಗಾಗಿ ಎಡಗೈ ಸಮುದಾಯ ಕಳೆದ 35 ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದು, ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡಿರುವುದು ಸಮಾಧಾನ ತಂದಿದೆ. ಆದರೆ ಈಗ ನೀಡಿರುವ ಶೇ6ರಷ್ಟು ಮೀಸಲಾತಿಯನ್ನು 7ಕ್ಕೆ ಹೆಚ್ಚಿಸಬೇಕು ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಒತ್ತಾಯಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಬಲಗೈ, ಎಡಗೈ ಸಮುದಾಯಕ್ಕೆ ಶೇ6, ಬೋವಿ, ಲಂಬಾಣಿ, ಕೊರಮ, ಕೊರಚ, ಅಲೆಮಾರಿ ಸಮುದಾಯ ಶೇ5ರಷ್ಟು ಒಳಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ. ಎಡಗೈ ಸಮುದಾಯಕ್ಕೆ ಹಿಂದಿನಿಂದಲೂ ಮೀಸಲಾತಿಯಲ್ಲಿ ಅನ್ಯಾಯ ಆಗಿರುವುದರಿಂದ 7ರಷ್ಟು ಮೀಸಲಾತಿ ನೀಡುವ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಪರಿಯಾ ಜಾತಿಯನ್ನು ಮಾದಿಗ ಸಮುದಾಯಕ್ಕೆ ಸೇರಿಸಿ ಶೇ6ರ ಎಡಗೈ ಸಮುದಾಯದ ಮೀಸಲಾತಿಯಲ್ಲಿ ಅವರಿಗೂ ಪಾಲು ನೀಡುವಂತೆ ಮಾಡಿರುವುದು ನಮ್ಮ ಸಮುದಾಯಕ್ಕೆ ಮತ್ತೆ ಅನ್ಯಾಯವಾಗುವಂತೆ ಮಾಡಲಾಗಿದೆ ಎಂದರು.

ಅಸ್ಪೃಶ್ಯ ಸಮಾಜಕ್ಕಿಂತಲೂ ನಿಕೃಷ್ಟ ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯಕ್ಕೆ ನೀಡಿದ್ದ ಶೇ1ರಷ್ಟು ಮೀಸಲಾತಿಯನ್ನು ತೆಗೆದು ಹಾಕಿ ಸ್ಪೃಶ್ಯ ಜಾತಿಗೆ ಸೇರಿದ ಬೋವಿ ಲಂಬಾಣಿ ಜಾತಿಗೆ ಸೇರಿಸಿರುವುದರಿಂದ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ವಿಚಾರದಲ್ಲಿ ಅಲೆ ಮಾರಿ ಸಮುದಾಯದ ಜೊತೆ ನಿಂತು ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಮುಖಂಡ ಪ್ರಶಾಂತ್ ಮಾತನಾಡಿ, ಒಳಮೀಸಲಾತಿ ಜಾರಿ ಕ್ರಮ ಅವೈಜ್ಞಾನಿಕವಾಗಿದೆ. ಆದಿಕರ್ನಾಟಕ, ಆದಿದ್ರಾವಿಡ ಸಮುದಾಯವನ್ನು ಬಲಗೈ ಸಮುದಾಯಕ್ಕೆ ಸೇರಿಸಿ ಶೇ5ರಷ್ಟಿದ್ದ ಮೀಸಲಾತಿಯನ್ನು 6ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಬಲಗೈ ಹಾಗೂ ಎಡಗೈ ಸೇರಿದ ಉಪ ಜಾತಿಗಳನ್ನು ಸಮರ್ಪಕವಾಗಿ ವರ್ಗೀಕರಿಸಲಿಲ್ಲ, ಇದ್ದರಿಂದ ಮೀಸಲಾತಿಯಲ್ಲಿ ಎಡಗೈ ಸಮುದಾಯಕ್ಕೆ ದ್ರೋಹ ಬಗೆದಂತಾಗಿದೆ ಎಂದು ಆರೋಪಿಸಿದರು.

ಮುಖಂಡರಾದ ಕೃಷ್ಣಮೂರ್ತಿ, ಶಾಂತಕುಮಾರ್, ಶಿವಣ್ಣ, ರಮೇಶ್, ಶಿವಾನಂದ, ಕರಿಯಪ್ಪ, ರಮೇಶ್, ಸತೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.