ಮಳವಳ್ಳಿ: ಪಟ್ಟಣದಲ್ಲಿ ಡಿಸೆಂಬರ್ನಲ್ಲಿ ನಡೆಯುವ ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿ ಅವರ 1,066ನೇ ಜಯಂತಿ ಮಹೋತ್ಸವ ಆಚರಿಸುವ ಸಂಬಂಧ ತಾಲ್ಲೂಕಿನ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ನಿಯೋಗ ಕನಕಪುರ ದೇಗುಲ ಮಠಾಧ್ಯಕ್ಷ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಪೂರ್ವಭಾವಿ ಸಭೆ ನಡೆಸಿತು.

ಕನಕಪುರ ದೇಗುಲ ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಚನ್ನಬಸವಸ್ವಾಮಿ ಅವರ ನೇತೃತ್ವದಲ್ಲಿ ಬರುವ ಡಿಸೆಂಬರ್ 18ರಿಂದ ಒಂದು ವಾರ ಮಳವಳ್ಳಿ ಪಟ್ಟಣದಲ್ಲಿ ಸುತ್ತೂರಿನ ಶಿವರಾತ್ರಿಶ್ವರ ಶಿವಯೋಗಿಗಳ 1,066ನೇ ಜಯಂತಿ ಮಹೋತ್ಸವ ಆಚರಣೆ ಸಂಬಂಧ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಚನ್ನಬಸವಸ್ವಾಮಿ ಮಾತನಾಡಿ, ‘ಜಯಂತಿ ಆಚರಣೆ ಸಂಬಂಧ ಪ್ರತಿಯೊಬ್ಬರು ತಮ್ಮದೇ ಆದ ಜವಾಬ್ದಾರಿ ತೆಗೆದುಕೊಂಡು ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಮುಂದಾಗಬೇಕು. ಎಲ್ಲಾ ಸಮುದಾಯದ ಜನರು ಉತ್ಸವದಲ್ಲಿ ಭಾಗವಹಿಸುವಂತೆ ಪ್ರಚಾರ ಮಾಡಬೇಕು. ತಾಲ್ಲೂಕಿನಲ್ಲಿ ಪೂರ್ವಭಾವಿ ಸಭೆ ನಡೆಸಿ ಸಭೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲರನ್ನು ಆಹ್ವಾನಿಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.

ಜಯಂತಿ ಆಚರಣೆಯ ಸಂಚಾಲಕ ಪ್ರೊ. ಪಿ.ಎಂ.ಮಹದೇವಸ್ವಾಮಿ ಹಾಗೂ ತಾಲ್ಲೂಕು ವೀರಶೈವ ಮಹಾಸಭಾದ ಪದಾಧಿಕಾರಿಗಳು ಸೇರಿದಂತೆ ನೂರಾರು ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.