ಮಳವಳ್ಳಿ: ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿ ಅವರ 1066ನೇ ಜಯಂತ್ಯುತ್ಸವಕ್ಕೆ ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ, ಮಂಟಪ, ವೇದಿಕೆ, ಮಹಾ ದ್ವಾರಗಳ ಉದ್ಘಾಟನೆಯೊಂದಿಗೆ ಚಾಲನೆ ನೀಡಲಾಯಿತು.

ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಬೃಹತ್ ವೇದಿಕೆಯ ಆವರಣದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಿಗ್ಗೆ 6ಗಂಟೆಗೆ ಸುಪ್ರಭಾತ, ಪಂಚಾಕ್ಷರಿ ಮಂತ್ರ ಪಠಣ, ಸಾಮೂಹಿಕ ಪ್ರಾರ್ಥನೆಗಳೊಂದಿಗೆ ಧಾರ್ಮಿಕ ಆಚರಣೆಗಳು ಆರಂಭಗೊಂಡವು. ಬೆಳಿಗ್ಗೆ 8.30ರ ಸುಮಾರಿಗೆ ಮೈಸೂರಿನ ಹೊಸಮಠದ ಚಿದಾನಂದ ಸ್ವಾಮೀಜಿ ಅವರು ಧ್ವಜಾರೋಹಣ ನೇರವೇರಿಸಿದರು.

ಷಡಕ್ಷರ ದೇವ ಅನುಭವ ಮಂಟಪವನ್ನು ಮೈಸೂರಿನ ಸಿದ್ದಮಲ್ಲ ಸ್ವಾಮೀಜಿ ಅವರು ಉದ್ಘಾಟಿಸಿದರು. ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ವೇದಿಕೆಯನ್ನು ಹುಂಡಿ ಮಠದ ಗೌರಿ ಶಂಕರ ಸ್ವಾಮೀಜಿ ಅವರು ಲೋಕಾರ್ಪಣೆ ಮಾಡಿದರು. ಮಂಟೇಸ್ವಾಮಿ ದ್ವಾರವನ್ನು ಬೊಪ್ಪೇಗೌಡನಪುರ ಹೋಬಳಿಯ ಮಂಟೇಸ್ವಾಮಿ ಮಠದ ಜ್ಞಾನಾನಂದ ಚೆನ್ನರಾಜೇ ಅರಸು ಉದ್ಘಾಟಿಸಿದರು.

ಸಿದ್ದಪ್ಪಾಜಿ ದ್ವಾರಕ್ಕೆ ಮೈಸೂರಿನ ಕಲ್ಯಾಣ ಸಿರಿ ಬಂತೇಜಿ ಅವರು ಚಾಲನೆ ನೀಡಿದರು. ನಂತರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎಲ್ಲರೂ ಸೇರಿ ಮುಖ್ಯ ವೇದಿಕೆಯನ್ನು ಉದ್ಘಾಟಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಕನಕಪುರ ಶ್ರೀದೇಗುಲ ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ಸಮಿತಿಯ ಸದಸ್ಯರು, ಮುಖಂಡರು ಹಾಗೂ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು.

ನಿತ್ಯ ದಾಸೋಹಕ್ಕೆ ಚಾಲನೆ: ಏಳು ದಿವಸ ನಡೆಯುವ ಜಯಂತ್ಯುತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ವಿಶೇಷ ರೀತಿಯಲ್ಲಿ ನಿತ್ಯ ದಾಸೋಹವನ್ನು ಆಯೋಜಿಸಲಾಗಿದೆ. ಮಂಗಳವಾರ ಬೆಳಿಗ್ಗೆ ವಾಂಗಿಬಾತ್, ಖಾರಬಾತ್, ಕೇಸರಿಬಾತ್, ಮಧ್ಯಾಹ್ನ ಬಿಸಿ ಬೇಳೆ ಬಾತ್, ಮೊಸರನ್ನ, ಜಾಮೂನು ಹಾಗೂ ರಾತ್ರಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿವಸ 40 ಸಾವಿರಕ್ಕೂ ಹೆಚ್ಚು ಮಂದಿ ಊಟ ಮಾಡಿದರು. ಆಗಮಿಸಿದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ಪ್ರತ್ಯೇಕ ವಾಹನದ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಬಾರದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಬಿಗಿ ಭದ್ರತೆಯಲ್ಲಿ ರಾಷ್ಟ್ರಪತಿ ಆಗಮನ

ರಾಷ್ಟ್ರದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರು ಆಗಮನ ಪಟ್ಟಣದಲ್ಲಿ ಹೊಸ ಸಂಚಲನ ಮೂಡಿಸಿತು. ಇದೇ ಮೊದಲ ಬಾರಿಗೆ ಮಳವಳ್ಳಿಗೆ ಭೇಟಿ ನೀಡಿದ್ದರಿಂದ ಪಟ್ಟಣದ ಪ್ರಮುಖ ಕೊಳ್ಳೇಗಾಲ ರಸ್ತೆ ಮೈಸೂರು ರಸ್ತೆಗಳಲ್ನ ಎಲ್ಲ ಅಂಗಡಿಗಳು ಭದ್ರತಾ ದೃಷ್ಟಿಯಿಂದ ಮುಚ್ಚಿಸಿದ ಹಿನ್ನೆಲೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ವೇದಿಕೆ ಬಳಿಯ ರಸ್ತೆಯ ಬದಿಗಳಲ್ಲಿ ನಿಂತ ಸಾವಿರಾರು ಜನರು ದ್ರೌಪದಿ ಮುರ್ಮು ಅವರನ್ನು ನೋಡಿ ಖುಷಿಪಟ್ಟರು. ಭದ್ರತೆಗಾಗಿ ಸಾವಿರಾರು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.

‘ರಾಸಾಯನಿಕ ಗೊಬ್ಬರದ ಬಳಕೆ ನಿಲ್ಲಿಸಿ’

ಜಯಂತ್ಯುತ್ಸವದ ಭಾಗವಾಗಿ ಮಂಗಳವಾರ ಸಂಜೆ ಚಂದ್ರವನ ಆಶ್ರಮದ ದುರದುಂಡೇಶ್ವರ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾವಯವ ಕೃಷಿ-ಸಿರಿಧಾನ್ಯ ಮತ್ತು ಉತ್ಪನ್ನಗಳು ಬಗ್ಗೆ ಆರ್ಗ್ ಟ್ರೀನ ತೆಂಕಹಳ್ಳಿ ಬಿ.ಮಹೇಶ್ ಉಪನ್ಯಾಸ ನೀಡಿದರು. ‘ಸಾವಯವ ಕೃಷಿ ಪದ್ಧತಿಯಿಂದ ಬೆಳೆಯುವ ರಾಗಿ ನವಣೆ ಸಾಮೆ ಸೇರಿದಂತೆ ಅನೇಕ ಸಿರಿಧಾನ್ಯಗಳಲ್ಲಿ ಪೋಷಕಾಂಶ ಹಾಗೂ ನಾರಿನಾಂಶ ಹೆಚ್ಚಿದ್ದು ಮಧುಮೇಹ ಹೃದಯ ರೋಗ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇತ್ತೀಚಿನ ದಿನಮಾನಗಳಲ್ಲಿ ಸಾವಯವ ಕೃಷಿಯತ್ತ ಜನರು ಚಿಂತನೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸುವ ಮೂಲಕ ಭೂಮಿಯ ಫಲವತತ್ತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.