ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ: ಐದು ಮೇಕೆ ಕಳವು

Published 2 ಸೆಪ್ಟೆಂಬರ್ 2023, 14:25 IST
Last Updated 2 ಸೆಪ್ಟೆಂಬರ್ 2023, 14:25 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಪಿ.ಡಿ.ಜಿ ಕೊಪ್ಪಲಿನಲ್ಲಿ ಶುಕ್ರವಾರ ರಾತ್ರಿ ರೈತ ಲೋಕೇಶ್ ಎಂಬುವವರಿಗೆ ಸೇರಿದ 5 ಮೇಕೆಗಳನ್ನು ಅಪಹರಿಸಿದ್ದಾರೆ.

ರೈತ ತಮ್ಮ ಹಳೆಯ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದದರು. ಬೀಗ ಮುರಿದ ಕಳ್ಳರು ಒಂದೂವರೆ ಲಕ್ಷ ಬೆಲೆ ಬಾಳುವ ಮೇಕೆಗಳನ್ನು ಕದ್ದೊಯ್ದಿದ್ದಾರೆ.

ಈ ಸಂದರ್ಭದಲ್ಲಿ ಮನೆಯವರು ಎಚ್ಚರಗೊಳ್ಳಬಹುದೆಂದು ಸಮೀಪದಲ್ಲಿದ್ದ ಮೂರು ಮನೆಗಳ ಬಾಗಿಲುಗಳ ಮುಂದಿನ ಚಿಲಕ ಹಾಕಿ ಕೃತ್ಯ ಎಸೆಗಿದ್ದಾರೆ.

ಈ ಸಂಬಂಧ  ಲೋಕೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

‘ಪೊಲೀಸರು ತನಿಖೆ ನಡೆಸಿ ಬಡ ರೈತನಿಗೆ ನ್ಯಾಯ ಒದಗಿಸುವಂತೆ’ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT