ಮಂಡ್ಯ: ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸೋಮವಾರ ಸಂಜೆ ಇಂಡವಾಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಕಚೇರಿಗೆ ಭೇಟಿ ನೀಡಿ ಹಾಜರಾತಿ, ಚಲನ- ವಲನ ವಹಿ, ನಗದು ವಹಿ, 15ನೇ ಹಣಕಾಸು ಯೋಜನೆ ವಹಿ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ವಹಿಗಳನ್ನು ಪೂರ್ಣಗೊಳಿಸದೇ ಇರುವ ಬಗ್ಗೆ, ಚೆಕ್ ಗಳಿಗೆ ಪಿ.ಡಿ.ಒ ಅವರು ಸಹಿ ಮಾಡಿ ಯಾರದೇ ಹೆಸರು ನಮೂದಿಸದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು ಹಾಗೂ ತಕ್ಚಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕಚೇರಿಗೆ ಕರೆಸುವಂತೆ ನಿರ್ದೇಶಿಸಿದರು.

ಗೋಮಾಳದಲ್ಲಿ ಮನೆ ಕಟ್ಟಲು 9 ಮತ್ತು 11 ನೀಡಿರುವ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಿದರು. ಈ ಹಿಂದೆ ಕಾರ್ಯನಿರ್ವಹಿಸುತ್ತದೆ ನಿರ್ವಹಿಸುತ್ತಿದ್ದ ಪಿ.ಡಿ.ಒ ಅವರ ಮಾಹಿತಿಯನ್ನು ಸಹ ಪಡೆದುಕೊಂಡರು.

ಪಿ.ಡಿ.ಒ ಅವರಿಮದ ಮೊಬೈಲ್ ಪಡೆದು ಅವರ ಖಾತೆಯಲ್ಲಿ ವಹಿವಾಟು ನಡೆಸಿರುವ ಬಗ್ಗೆ ವಿಚಾರಣೆ ನಡೆಸಿದರು. ಸಂಬಳ ಹಾಗೂ ವಹಿವಾಟಿನ ಬಗ್ಗೆ ಸಂದೇಹ ಉಂಟಾಗಿದ್ದು, ಇವರ ವಿವಿಧ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಹಾಗೂ ಸ್ಟೇಟ್ಮೆಂಟ್ ತರಿಸಿಕೊಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.

ಕಚೇರಿಯ ದ್ವಿತೀಯ ದರ್ಜೆ ಸಹಾಯಕರು ಕಚೇರೊಯಲ್ಲಿ ಹಾಜರಿಲ್ಲದ ಬಗ್ಗೆ ಹಾಗೂ ದಾಖಲೆಗಳನ್ನು ಪರಿಶೀನೆಗೆ ನೀಡದರ ಇರುವ ಬಗ್ಗೆ ಹಲವು ದಿನಗಳ ಹಿಂದೆಯೇ ಭೇಟಿ ನೀಡುವುದಾಗಿ ಮಾಹಿತಿ ನೀಡಿದ್ದರೂ ಸರಿಯಾಗಿ ದಾಖಲೆ ಹಾಜರು ಪಡೆಸಿರುವುದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಲೋಕಾಯುಕ್ತ ಕಚೇರಿಯ ಕಾರ್ಯದರ್ಶಿ ಅರವಿಂದ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

‘ನೀನೇನು ಡ್ಯಾಮೇಜ್ ಆಫೀಸರ್ರಾ...’

ನರೇಗಾದಲ್ಲಿ ಕೈಗೊಂಡಿರುವ ಕೆಲಸಗಳು ಇಂಗು ಗುಂಡಿ ರಸ್ತೆ ದೀಪಗಳ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡರು. ನೀವೇನು ಪಂಚಾಯಿತಿ ಡೆವಲಮೆಂಟ್ ಆಫಿಸರ್ ಅಥವಾ ಪಂಚಾಯಿತಿ ಡ್ಯಾಮೇಜ್ ಆಫೀಸರ್ರಾ ಅಂತ ಉಪ ಲೋಕಾಯುಕ್ತ ಬಿ.ವೀರಪ್ಪ ಕಿಡಿಕಾರಿದರು. ಇಂಗು ಗುಂಡಿ ಮಾಡುವುದರಿಂದ ಕೆರೆಗಳಿಗೆ ಗಲೀಜು ನೀರು ಮಿಶ್ರಣವಾಗಲು ಸಾಧ್ಯವಿಲ್ಲ. ಆದ್ದರಿಂದ ಪಂಚಾಯಿತಿಗಳು ಇಂಡು ಗುಂಡಿ ನಿರ್ಮಾಣ ಮಾಡಲು ಹೆಚ್ಚು ಒತ್ತು ನೀಡಬೇಕು ಎಂದು ಉಪಲೋಕಾಯುಕ್ತರು ತಿಳಿಸಿದರು. ಇಂಡವಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಜನಸಂಖ್ಯೆ ಕುಟುಂಬಗಳು ಹಾಗೂ ಕರ ಸಂಗ್ರಹಣೆ ಮಾಡಿರುವ ಕುರಿತು ಮಾಹಿತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.