ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಲಾಕ್‌ಡೌನ್‌ನಲ್ಲೂ ಅಪಘಾತ, 24 ಮಂದಿ ಸಾವು

Last Updated 24 ಜೂನ್ 2021, 5:38 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ ಅವಧಿಯಲ್ಲಿಯೂ ಅಪಘಾತಗಳು ಮುಂದುವರಿದಿದ್ದು, ಒಂದೂವರೆ ತಿಂಗಳಿನಲ್ಲಿ ಸಂಭವಿಸಿದ 60 ಅಪಘಾತ ಪ್ರಕರಣಗಳಲ್ಲಿ 24 ಮಂದಿ ಮೃತಪಟ್ಟಿದ್ದಾರೆ.

ಜನವರಿ ತಿಂಗಳಿನಲ್ಲಿ 15 ಮಂದಿ ಮೃತಪಟ್ಟಿದ್ದು ಬಿಟ್ಟರೆ, ಲಾಕ್‌ಡೌನ್‌ ಆಗಿದ್ದ ಮೇ ತಿಂಗಳಿನಲ್ಲಿ 14 ಸಾವು ಸಂಭವಿಸಿರುವುದೇ ಅತ್ಯಧಿಕ ಎನ್ನಿಸಿದೆ. ಲಾಕ್‌ಡೌನ್‌ ಆಗಿದ್ದರೂ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆ ಉಂಟಾಗಿಲ್ಲ.

ಲಾಕ್‌ಡೌನ್‌ ಸಮಯದಲ್ಲಿ ರಸ್ತೆಗಳಲ್ಲಿ ಹೆಚ್ಚಿನ ವಾಹನ ಸಂಚಾರ ಇಲ್ಲದಿರುವುದರಿಂದ ಅತಿ ವೇಗದಲ್ಲಿ ಚಾಲನೆ ಮಾಡುವುದು, ಹೆಲ್ಮೆಟ್‌ ಹಾಕದಿರುವುದು, ಮದ್ಯ ಸೇವನೆ ಮಾಡಿ ಚಾಲನೆ ಮಾಡಿರುವುದರಿಂದಲೇ ಅತ್ಯಧಿಕ ಸಾವು ಉಂಟಾಗಿದೆ ಎಂದು ಸಂಚಾರ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ 419 ವಾಹನಗಳನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 370 ದ್ವಿಚಕ್ರ ವಾಹನಗಳು, 47 ಕಾರುಗಳು, 2 ಆಟೊಗಳು ಇವುಗಳಲ್ಲಿ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT