ಮಂಗಳವಾರ, ಜೂನ್ 2, 2020
27 °C

ಕೊರೊನಾ ವಿರುದ್ಧ ಸಮರ: ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿದ ಬಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು:​ ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ಪ್ರಮುಖ ಸಿಂಹ ಎಂಬಾತ ತಾನು ಕೂಡಿಟ್ಟ ಹಣವನ್ನು ತನ್ನ ಜನ್ಮದಿನದ ಪ್ರಯುಕ್ತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ.

ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ಹಣ ನೀಡಿ ಇದನ್ನು ಕೊರೊನಾ ಪ್ರಯುಕ್ತ ಮಾಡಲಾದ ಲಾಕ್‌ಡೌನ್‌ ನಿಂದ ತೊಂದರೆಗೆ ಒಳಗಾಗಿರುವವರಿಗೆ ನೀಡಬೇಕು ಎಂದು ಮನವಿ ಮಾಡಿದ್ದಾನೆ.

ಮೈಸೂರಿನ ಕೇಂದ್ರೀಯ ವಿದ್ಯಾ ಲಯದಲ್ಲಿ ಆರನೇ ತರಗತಿ ಓದುತ್ತಿರುವ ಮಹದೇವಪುರದ ಪ್ರಮುಖ ಸಿಂಹ ಎಂಬ ವಿದ್ಯಾರ್ಥಿ ತಾನು
ಕೂಡಿಟ್ಟಿದ್ದ ₹ 2 ಸಾವಿರ ನಗದು ನೀಡಿದ್ದಾನೆ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ₹ 2 ಸಾವಿರ ಸೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈತ, ‘ಇಂದು ನನ್ನ ಜನ್ಮದಿನ. ಇದರ ಪ್ರಯುಕ್ತ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ತುಂಬಾ ದಿನಗಳಿಂದ ಆಸೆಯಿತ್ತು. ಆದರೆ, ನಮ್ಮ ದೇಶ ಇಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ನಾನು ಜನ್ಮದಿನ ಆಚರಣೆ ಮಾಡುವುದು ಬೇಡ ಎನಿಸಿ ವರ್ಷದಿಂದ ಕೂಡಿಟ್ಟ ಹಣವನ್ನು ಕಷ್ಟ ಎದುರಿಸುತ್ತಿರುವ ಜನರಿಗೆ ಸ್ವಲ್ಪ ನೆರವಾಗಲಿ ಎಂದು ನೀಡಿರುವೆ. ಇದೇ ನನ್ನ ಆಚರಣೆ’ ಎಂದು ತಿಳಿಸಿದ್ದಾನೆ.

ಈತ ಮಹದೇವಪುರ ನಿವಾಸಿ ಜಯ ಸಿಂಹ ಶ್ರೀಧರ್, ಶ್ರೀಲಕ್ಷಿ ಅವರ ಪುತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು