ಬುಧವಾರ, ಜನವರಿ 22, 2020
20 °C

ಪೇಜಾವರ ಶ್ರೀ ಗುಣಮುಖರಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಿಷ್ಯರು ತಿಳಿಸಿದ್ದಾರೆ’ ಎಂದು ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ವಿಷಯ ತಿಳಿದೊಡನೆ ಮೊಬೈಲ್ ಮೂಲಕ ಸಂಪರ್ಕಿಸಿದ್ದೆವು. ಪೇಜಾವರರ ಶಿಷ್ಯಂದಿರು ಮಾತನಾಡಿದರು. ನ್ಯುಮೋನಿಯಾದಿಂದ ಉಸಿರಾಟದ ಸಮಸ್ಯೆಗೀಡಾಗಿದ್ದರು. ಸೋಂಕು ತಗುಲದಂತೆ ಐಸಿಯುನಲ್ಲಿರಿಸಲಾಗಿದೆ ಎಂದು ಹೇಳಿದರು’ ಎಂದು ಶುಕ್ರವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಸ್ವಾಮೀಜಿ ಪ್ರತಿಕ್ರಿಯಿಸಿದರು.

‘ವಿಶ್ವೇಶತೀರ್ಥರು ಭಗವಂತನ ಕೃಪೆಯಿಂದ ಆದಷ್ಟು ಬೇಗ ಗುಣಮುಖರಾಗಲಿ’ ಎಂದು ಸುತ್ತೂರು ಸ್ವಾಮೀಜಿ ಇದೇ ಸಂದರ್ಭ ಆಶಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು