ಶುಕ್ರವಾರ, ಮೇ 27, 2022
22 °C

ಮೈಸೂರು ಅರಮನೆ ಆವರಣದಲ್ಲಿ ‍ಪುಷ್ಪ ಪ್ರದರ್ಶನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಶನಿವಾರ ಸಂಜೆ ಚಾಲನೆ ನೀಡಿದರು.

ಅರಮನೆ ಮಂಡಳಿಯಿಂದ ಏರ್ಪಡಿಸಿರುವ ಈ ಪ್ರದರ್ಶನ ಜ.2ರ ವರೆಗೆ ಇರಲಿದೆ. ಸಾರ್ವಜನಿಕರಿಗೆ ಬೆಳಿಗ್ಗೆ 10ರಿಂದ ರಾತ್ರಿ 8.30ರ ವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಪ್ರತಿಕೃತಿ ಈ ಪ್ರದರ್ಶನದ ಪ್ರಮುಖ ಆಕರ್ಷಣೆ ಎನಿಸಿದೆ. ಇತ್ತೀಚೆಗೆ ನಿಧನರಾದ ಸೇನಾಪಡೆಗಳ ಮುಖ್ಯಸ್ದ ಜನರಲ್‌ ಬಿಪಿನ್‌ ರಾವತ್‌, ನಟ ಪುನೀತ್‌ ರಾಜ್‌ಕುಮಾರ್ ಅವರ ಪ‍್ರತಿಕೃತಿಯೂ ಇದೆ.

ನೇಗಿಲು ಹೊತ್ತ ರೈತ, ಆನೆಗಳ ಖೆಡ್ಡಾ ಕಾರ್ಯಾಚರಣೆ, ಹೂವಿನ ಪಲ್ಲಕ್ಕಿ, ಜಯಚಾಮರಾಜ ಒಡೆಯರ್‌, ಚಾಮುಂಡೇಶ್ವರಿ, ಮಹಿಷಾಸುರ, ನಂದಿ ವಿಗ್ರಹದ ಪ್ರತಿಕೃತಿಗಳೂ ಗಮನ ಸೆಳೆಯುತ್ತಿವೆ. ಒನಕೆ ಓಬವ್ವ, ನೀರಜ್‌ ಚೋಪ್ರಾ ಪ್ರತಿಕೃತಿಗಳೂ ಇವೆ. ಮಕ್ಕಳಿಗಾಗಿ ಹೂವಿನಲ್ಲಿ ಟಾಮ್ ಅಂಡ್‌ ಜರ್ರಿ ಪ್ರತಿಕೃತಿ ರೂಪಿಸಲಾಗಿದೆ.

ಪುಷ್ಪ ಪ್ರದರ್ಶನದ ಜತೆಗೆ ಗೊಂಬೆಗಳ ಪ್ರದರ್ಶನ ಮತ್ತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಮೊದಲ ದಿನ ಸಾವಿರಾರು ಪ್ರವಾಸಿಗರು ಪುಷ್ಪ ಪ್ರದರ್ಶನ ಕಣ್ತುಂಬಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು