ಮೈಸೂರಿನಲ್ಲಿ ವೃದ್ದ ದಂಪತಿ ಕೊಲೆ‌, ಪ್ರಕರಣ ದಾಖಲು 

ಸೋಮವಾರ, ಮೇ 27, 2019
21 °C

ಮೈಸೂರಿನಲ್ಲಿ ವೃದ್ದ ದಂಪತಿ ಕೊಲೆ‌, ಪ್ರಕರಣ ದಾಖಲು 

Published:
Updated:

ಮೈಸೂರು: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ವಯೋವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75)  ಹತ್ಯೆಯಾದ ದಂಪತಿಗಳು. ಮೈಸೂರು ಹುಣಸೂರು ಮುಖ್ಯ ರಸ್ತೆ ಸಮೀಪ ಇರೋ ತೋಟದ ಮನೆಯಲ್ಲಿ ತಡರಾತ್ರಿ ಈ ಕೃತ್ಯ ನಡೆದಿದೆ.

ತೋಟದಲ್ಲಿದ್ದ ಸೆಂಟ್ರಿಂಗ್ ಸಾಮಾನು ನೋಡಿಕೊಂಡು ವೃದ್ಧ ದಂಪತಿ ಅಲ್ಲೇ ಉಳಿದ್ದಿದ್ದರು.ಈ ನಡುವೆ  ವಯೋವೃದ್ಧರ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ  ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ದಂಪತಿ 4 ಹೆಣ್ಣು ಮಕ್ಕಳು ಓರ್ವ ಗಂಡು ಮಗನನ್ನು ಹೊಂದಿದ್ದು,  ದಂಪತಿ ಕೊಲೆ ಯಾಕೆ ನಡೆದಿದೆ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಇಲವಾಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !