ಸೋಮವಾರ, ಸೆಪ್ಟೆಂಬರ್ 16, 2019
27 °C

ಯುವ ದಸರಾ ಉದ್ಘಾಟನೆ: ಸಿಂಧೂಗೆ ಆಹ್ವಾನ

Published:
Updated:
Prajavani

ಬೆಂಗಳೂರು: ನಾಡಿನ ಹೆಮ್ಮೆಯ ಯುವ ದಸರಾವನ್ನು ಉದ್ಘಾಟಿಸಲು ಆಗಮಿಸಬೇಕು ಎಂದು ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌
ಪಿ. ವಿ. ಸಿಂಧೂ ಅವರಿಗೆ ಸಿ.ಎಂ ಆಹ್ವಾನ ನೀಡಿದ್ದಾರೆ.

‘ಕ್ರೀಡಾ ಕ್ಷೇತ್ರದಲ್ಲಿ ನೀವು ಅತ್ಯುನ್ನತ ಸಾಧನೆ ಮಾಡಿ ಯುವಕರಿಗೆ ಪ್ರೇರಣೆಯಾಗಿದ್ದೀರಿ. ಈ ಬಾರಿ ನಡೆಯುತ್ತಿರುವ 410ನೇ ದಸರಾ ಸಮಾರಂಭದ ಯುವ ದಸರಾವನ್ನು ಉದ್ಘಾಟಿಸುವ ಮೂಲಕ ನಾವು ನೀಡುತ್ತಿರುವ ಗೌರವ ಸ್ವೀಕರಿಸಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

 

Post Comments (+)