ಶನಿವಾರ, ಆಗಸ್ಟ್ 13, 2022
25 °C
ಸಾಲಿಗ್ರಾಮದಲ್ಲೇ ಕರ್ತವ್ಯ ಆರಂಭ - ಅಂತ್ಯ

ಸಾಲಿಗ್ರಾಮ: ನಿವೃತ್ತಿಗೆ ಎರಡೇ ದಿನ ಬಾಕಿ, ಪಿಎಸ್‌ಐ ಹೃದಯಾಘಾತದಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲಿಗ್ರಾಮ: ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ದೊಡ್ಡೇಗೌಡ (60) ಹೃದಯಾಘಾತಕ್ಕೀ ಡಾಗಿ ಮಂಗಳ ವಾರ ರಾತ್ರಿ ನಿಧನರಾದರು.

ದೊಡ್ಡೇಗೌಡ ಜೂನ್‌ 30ರ ಗುರುವಾರ ಕರ್ತವ್ಯದಿಂದ ನಿವೃತ್ತರಾಗಬೇಕಿತ್ತು.

ಪೊಲೀಸ್‌ ಜೀಪ್‌ನಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ದೊಡ್ಡೇಗೌಡರಿಗೆ ಎದೆನೋವು ಕಾಣಿಸಿ ಕೊಂಡಿದೆ. ತಕ್ಷಣವೇ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆ ಉಸಿರೆಳೆದಿದ್ದಾರೆ. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಅಂತ್ಯಕ್ರಿಯೆ ಸ್ವಗ್ರಾಮ ಹುಣಸೂರು ತಾಲ್ಲೂಕಿನ ಬಿಳಿಗೆರೆಯ ತೋಟದ ಮನೆಯಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.

ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್‌ಪಿ ಸುಮಿತ್, ಸಿಪಿಐ ಲವ, ಶ್ರೀಕಾಂತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

1989ರಲ್ಲಿ ಸಾಲಿಗ್ರಾಮ ಪೊಲೀಸ್‌ ಠಾಣೆಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ದೊಡ್ಡೇಗೌಡರು, ತಿ.ನರಸೀಪುರ, ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2021ರ ಜೂನ್ ತಿಂಗಳಿನಲ್ಲಿ ಸಾಲಿಗ್ರಾಮ ಠಾಣೆಗೆ ಪಿಎಸ್ಐಯಾಗಿ ನೇಮಕ ಗೊಂಡಿದ್ದರು. ನಿವೃತ್ತಿಗೆ ಎರಡು ದಿನ ಬಾಕಿ ಇರುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು