ಮಂಗಳವಾರ, ನವೆಂಬರ್ 24, 2020
19 °C

ಮಣ್ಣುಮುಕ್ಕ ಹಾವಿನ ಕಳ್ಳಸಾಗಣೆ; ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರಿನ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರ ದಳದ ಅಧಿಕಾರಿಗಳು 3 ಅಡಿ ಉದ್ದದ ಮಣ್ಣುಮುಕ್ಕ ಹಾವನ್ನು (2 ತಲೆ ಹಾವು) ರಕ್ಷಿಸಿ, ಐವರನ್ನು ಬಂಧಿಸಿದ್ದಾರೆ.

ದೊಡ್ಡಯ್ಯ (45), ಹೇಮಂತ್ (19), ಯೋಗೇಶ್ (24), ರವಿ (35) ಹಾಗೂ ಭರಮೇಗೌಡ (23) ಬಂಧಿತರು.

‘ಈ ಹಾವಿನಿಂದ ಅದೃಷ್ಟ ಬರುತ್ತದೆ ಎಂದು ನಂಬಿಸಿ ಮಾರಾಟ ಮಾಡಲೆಂದು ಆರೋಪಿಗಳು ಕಾರಿನಲ್ಲಿ ಹಾವಿನೊಂದಿಗೆ ಮೈಸೂರಿನತ್ತ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ತಾಲ್ಲೂಕಿನ ಸಿದ್ಧಲಿಂಗಪುರದ ಬಳಿ ತಪಾಸಣೆ ನಡೆಸಲಾಯಿತು. ಈ ವೇಳೆ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಡಿಸಿಎಫ್ ಪೂವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್‌ಎಫ್‌ಒ ವಿವೇಕ್, ಸಿಬ್ಬಂದಿಯಾದ ಲಕ್ಷ್ಮೀಶ, ಮೋಹನ್, ಮಹಂತೇಶ್‌ ನಾಯಕ, ಕೊಟ್ರೇಶ್, ರವಿಕುಮಾರ್, ರವಿನಂದನ್, ಮಧು, ಪುಟ್ಟಸ್ವಾಮಿ, ವಿರೂಪಾಕ್ಷ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.