ಮೈಸೂರು: ‘ಪ್ರಜಾಪ್ರಭುತ್ವದಲ್ಲಿ ನಾಯಕರನ್ನು ಆಯ್ಕೆ ಮಾಡುವುದು ಜನರು. ರಾಜಕಾರಣಿಗಳು ಜನಪರ ಕೆಲಸ ನಿರ್ವಹಿಸಿದರೆ ಜನರೇ ಗುರುತಿಸಿ ನಾಯಕರನ್ನಾಗಿಸುತ್ತಾರೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಶಾಸಕ ಕೆ.ಹರೀಶ್ಗೌಡ ಅವರ ಯಶೋಧಾ–ಕೃಷ್ಣ ಚಾರಿಟಬಲ್ ಟ್ರಸ್ಟ್ನಿಂದ ಇಲ್ಲಿನ ಕಲಾಮಂದಿರದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜನರ ಸೇವೆ ಮಾಡಲು ರಾಜಕಾರಣಿಗಳು ಸದಾ ಮುಂದಿರಬೇಕು. ದೊರೆತ ಅವಕಾಶ ಬಳಸಿಕೊಳ್ಳಬೇಕು. ಮೈಸೂರಿನಲ್ಲಿ ಯುವ ಶಾಸಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಉತ್ತಮ ರೀತಿಯ ನಡೆ, ನುಡಿ ಇರಿಸಿಕೊಳ್ಳುವ ಮೂಲಕ ನಾಯಕರಾಗಿ ಬೆಳೆಯಬಹುದು’ ಎಂದರು.

‘ಸಾರ್ವಜನಿಕ ಕ್ಷೇತ್ರದಲ್ಲಿ 15 ವರ್ಷಗಳ ಸೇವೆ ಸಲ್ಲಿಸಿದ್ದ ಕೆ.ಹರೀಶ್ ಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಅವಕಾಶ ನೀಡಿದರು. ಅದಕ್ಕೆ ಪೂರಕವಾಗಿ ಅವರ ಸೇವಾ ಮನೋಭಾವದಿಂದ ಜನಮನವನ್ನೂ ಗೆದ್ದಿದ್ದರು. ಮೈಸೂರು ಹಾಗೂ ಚಾಮರಾಜನಗರದ ಮೇಲೆ ಸಿದ್ದರಾಮಯ್ಯ ಅವರಿಗೆ ವಿಶೇಷ ಅಭಿಮಾನವಿದ್ದು, ಅನುದಾನಕ್ಕೆ ಯಾವುದೇ ಕೊರತೆ ಮಾಡಿಲ್ಲ. ಇದರ ಸದ್ಬಳಕೆ ಮಾಡಿಕೊಂದು ಅಭಿವೃದ್ಧಿ ಹೊಂದಿ’ ಎಂದರು.

ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ‘ಬಹುತೇಕ ವಿದ್ಯಾರ್ಥಿಗಳು ಮಧ್ಯಮ ಹಾಗೂ ಸಣ್ಣ ಕುಟುಂಬಕ್ಕೆ ಸೇರಿದ್ದು ಅವರಲ್ಲಿ ತಂತ್ರಜ್ಞಾನ ಕೌಶಲ ಬೆಳೆಯಲು ಲ್ಯಾಪ್ಟಾಪ್ ಬಳಕೆ ಅಗತ್ಯ. ಇದನ್ನು ಅರಿತು ನನ್ನ ತಂದೆ, ತಾಯಿ ಹೆಸರಿನ ಟ್ರಸ್ಟ್ ಮೂಲಕ 350 ವಿದ್ಯಾರ್ಥಿಗಳಿಗೆ ಇಂದು ಲ್ಯಾಪ್ಟಾಪ್ ನೀಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಿ’ ಎಂದು ಹೇಳಿದರು.

ಶಾಸಕರಾದ ತನ್ವೀರ್ ಸೇಠ್, ಎಂ.ಗಣೇಶ್ ಪ್ರಸಾದ್, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿದರು.

ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ರಾಜ್ಯ ಸಹಕಾರ ಸಂಘಗಳ ಪತ್ತಿನ ಮಹಾಮಂಡಲ ಅಧ್ಯಕ್ಷ ಎಸ್.ಚಂದ್ರಶೇಖರ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪುಷ್ಪಲತಾ ಚಿಕ್ಕಣ್ಣ, ದೇವರಾಜ ಕಾಂಗ್ರೆಸ್ ಬ್ಲಾಕ್ ಸಮಿತಿ ನಾಗಭೂಷಣ್, ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.