ಮೈಸೂರು: ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಜ.19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಜಿಲ್ಲೆಯ ಪಿರಿಯಾಟ್ಟಣದ ಬಿಜಿಎಸ್ ಪದವಿ ಕಾಲೇಜಿನ ಆವರಣದಲ್ಲಿ ‘ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳ’ ಆಯೋಜಿಸಲಾಗಿದೆ.

ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ ಅಂಗವಾಗಿ ಮೇಳ ಹಮ್ಮಿಕೊಳ್ಳಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ವಿವಿಧ ಕೋರ್ಸ್ಗಳ ಪದವಿ (ಪಾಸ್ ಅಥವಾ ಫೇಲ್), ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಸ್ನಾತಕೋತರ ಪದವೀಧರರು ಭಾಗವಹಿಸಬಹುದಾಗಿದೆ. ಅಭ್ಯರ್ಥಿಯು 5 ಕಂಪನಿಗಳಿಗೆ ಸಂದರ್ಶನ ನೀಡಬಹುದಾಗಿದೆ.

ಬಕಾರ್ಡಿ ಇಂಡಿಯಾ, ಸಂಧರ್ ಇಂಡಿಯಾ, ಅಯುಷ್ಮಾನ್ ಹೆಲ್ತ್ ಕೇರ್, ಏಷಿಯನ್ ಪೇಂಟ್ಸ್, ಪ್ರಬೋಧಿತ ಸರ್ವಿಸಸ್, ಮಹಾಲಕ್ಷ್ಮಿ ಸ್ವೀಟ್ಸ್, ಭೀಮ ಪ್ರಾಪರ್ಟೀಸ್, ಕೇರ್ ಹೆಲ್ತ್ ಇನ್ಶೂರೆನ್ಸ್, ರುಚಾ ಎಂಜಿನಿಯರಿಂಗ್, ಆಟೊಲಿವ್ ಇಂಡಿಯಾ, ಕ್ರಿಯೇಟಿವ್ ಎಂಜಿನಿಯರ್ಸ್, ಕಲ್ಯಾಣಿ ಮೋಟರ್ಸ್, ಕ್ರಿಯಾ ನೆಕ್ಸ್ಟ್ ವೆಲ್ತ್, ವಿದ್ಯಾರ್ಥಿ ಮೋಟರ್ಸ್, ಮಾಂಡೋವಿ ಮೋಟರ್ಸ್, ಸೇವ್ ಸಂಗ್ರಹ ಕಾರ್ಪೊರೇಷನ್, ತೆಮೆರೆ ಇಂಡಿಯಾ, ಅಪೊಲೊ ಫಾರ್ಮ, ಮುತ್ತೂಟ್ ಫೈನಾನ್ಸ್, ಸೂರ್ಯೋದಯ ಬ್ಯಾಂಕ್, ಆದರ್ಶ್ ಕಿಯ ಮೋಟರ್ಸ್, ದ್ವಾರ ಫೈನಾನ್ಸಿಯಲ್ ಸರ್ವಿಸಸ್, ಡಸ್ಟರ್ಸ್ ಇಂಡಿಯಾ ಲಿಮಿಟೆಡ್, ವಿಎಫ್ಎಸ್ ಗ್ಲೋಬಲ್, ಇಂಡಸ್ ಬ್ಯಾಂಕ್, ಸುರಕ್ಷಾ ಕೇರ್ ಸೇರಿದಂತೆ 50 ಕಂಪನಿಗಳು ಪಾಲ್ಗೊಳ್ಳಲಿದ್ದು, 2ಸಾವಿರ ಉದ್ಯೋಗದ ಅವಕಾಶಗಳು ದೊರೆಯಲಿವೆ.

ವಿಶೇಷ ವ್ಯಕ್ತಿಗಳು ಹಾಗೂ ಅಂಗವಿಕಲರಿಗೂ ಅವಕಾಶವಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 96865 64192 (ಮೋಹನ್) ಸಂಪರ್ಕಿಸಬಹುದು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.