ಮೈಸೂರು: ‘ಓಲಾ, ಊಬರ್ ಬುಕ್ಕಿಂಗ್ ಆ್ಯಪ್ಗಳಿಂದ ಚಾಲಕರಿಗೆ ಅನ್ಯಾಯವಾಗುತ್ತಿದೆ’ ಎಂಬ ಕೂಗಿನ ನಡುವೆ ಆಟೊರಿಕ್ಷಾ ಚಾಲಕರೇ ಒಗ್ಗಟ್ಟಾಗಿ ಎಂಎಆರ್ಎಸ್ (ಮೈಸೂರು ಆಟೊರಿಕ್ಷಾ ಸರ್ವೀಸ್) ಆ್ಯಪ್ ಆರಂಭಿಸಿದ್ದಾರೆ.

ಮೈಸೂರು ಆಟೊರಿಕ್ಷಾ ಸರ್ವೀಸ್ ಟ್ರಸ್ಟ್ ಈ ಯೋಜನೆ ಆರಂಭಿಸಿದ್ದು, ಪ್ರಯಾಣಿಕರು ಆಟೊ ಚಾಲಕರನ್ನು ನೇರವಾಗಿ ಸಂಪರ್ಕಿಸುವ ಮಾಧ್ಯಮವಾಗಿ ಇದು ಕೆಲಸ ಮಾಡಲಿದೆ. ಇಲ್ಲಿ ಸರ್ಕಾರವು ನಿಗದಿಗೊಳಿಸಿದ ದರ ವಿಧಿಸಿದ್ದು, ಪ್ರತಿ ಬುಕ್ಕಿಂಗ್ಗೆ ಸೇವಾ ಶುಲ್ಕವಾಗಿ ₹3 ಪಡೆದುಕೊಳ್ಳಲಾಗುತ್ತದೆ. ಗ್ರಾಹಕರು ಪಾವತಿಸುವ ಮೊತ್ತವು ನೇರವಾಗಿ ಚಾಲಕರ ಕೈಸೇರಲಿದೆ.

ಚಾಲಕರು ಆ್ಯಪ್ ಡೌನ್ಲೋಡ್ ಮಾಡಿದ ಬಳಿಕ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಿಮೆ ವಿವರಗಳನ್ನು ನೀಡಬೇಕು. ಟ್ರಸ್ಟ್ ಸದಸ್ಯರು ಪರಿಶೀಲಿಸಿದ ಬಳಿಕ ಸೇವಾ ಶುಲ್ಕವಾಗಿ ₹100 ಪಾವತಿಸಬೇಕು. ನಂತರ ಆ್ಯಪ್ ಬಳಸಿ ಓಡಾಟ ಮಾಡಬಹುದು. ಪ್ರಯಾಣಿಕರೂ ಆ್ಯಪ್ನಲ್ಲಿ ಕೇಳುವ ವಿವರಗಳನ್ನು ಭರ್ತಿ ಮಾಡಿದ ಬಳಿಕ ತಾವು ತೆರಳಬೇಕಾದ ಸ್ಥಳವನ್ನು ಗುರುತಿಸಿದರೆ ಹತ್ತಿರದಲ್ಲಿರುವ ಚಾಲಕರು ಬರುತ್ತಾರೆ. ಸದ್ಯಕ್ಕೆ ಈ ಆ್ಯಪ್ ವೆಬ್ಸೈಟ್ನಲ್ಲಿ ಲಭ್ಯವಿದೆ. ವಾರದೊಳಗಾಗಿ ಪ್ಲೇಸ್ಟೋರ್ನಲ್ಲೂ ಸಿಗಲಿದೆ.

ಸುರಕ್ಷತೆಗೆ ಆದ್ಯತೆ: ಮಂಜುನಾಥ್ ಅವರು ಆ್ಯಪ್ ಅಭಿವೃದ್ಧಿಪಡಿಸಿದ್ದು, ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ. ಅದರಲ್ಲಿ ಪ್ಯಾನಿಕ್ ಬಟನ್ ಎಂಬ ಚಿಹ್ನೆಯಿದೆ. ಅದರಲ್ಲಿ ಪ್ರಯಾಣಿಕರು ತಮ್ಮ ಆಪ್ತರು, ಪೊಲೀಸ್ ಠಾಣೆ ಹಾಗೂ ಆ್ಯಪ್ನ ಕಸ್ಟಮರ್ ಕೇರ್ ಸಂಖ್ಯೆ ದಾಖಲಿಸಬಹುದು. ತುರ್ತು ಸಮಯದಲ್ಲಿ ಒಂದು ಬಟನ್ ಒತ್ತಿದಾಗ ಮೂರು ಕಡೆಗೂ ಕರೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆಗಳಿದ್ದರೆ ಮೊ.ಸಂ. 9242174559 ಸಂಪರ್ಕಿಸಬಹುದು.

‘ನಮಗಿರುವ ಇತಿಮಿತಿಯೊಳಗೆ ಆ್ಯಪ್ ಆರಂಭಿಸಿದ್ದು, ಮತ್ತಷ್ಟು ಅಭಿವೃದ್ಧಿಪಡಿಸುವ ಯೋಚನೆಯಿದೆ. ಪ್ರಯಾಣಿಕರಿಗೆ ಫಾಸ್ಟ್ ರೂಟ್ (ಒಳದಾರಿ) ತೋರಿಸುವಂತೆ ವ್ಯವಸ್ಥೆ ಮಾಡಲು ಆ್ಯಪ್ ವ್ಯವಸ್ಥಾಪಕರಿಗೆ ಸೂಚಿಸಿದ್ದೇವೆ’ ಎಂದು ಟ್ರಸ್ಟ್ನ ಮುಖಂಡ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದಾದರೂ ಆಟೊರಿಕ್ಷಾದಲ್ಲಿ ಸಮಸ್ಯೆಯಾಗಿ ಪ್ಯಾನಿಕ್ ಬಟನ್ ಬಳಸಿದಾಗ ಹತ್ತಿರದಲ್ಲಿರುವ ಆಟೊಗಳಿಗೆ ಸಂದೇಶ ಹೋಗಿ ಅವರು ಸಹಾಯಕ್ಕೆ ಬರುವಂತೆ ಮಾಡಬೇಕು ಎಂಬ ಯೋಚನೆ ಇದೆ. ಆಟೊಗಳಿಗೆ ಡ್ಯಾಶ್ ಬೋರ್ಡ್ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ತಿಳಿಸಲು ಹಾಗೂ ಜಗಳ ನಡೆದಾಗ ಯಾರ ತಪ್ಪೆಂದು ತಿಳಿಯಲು ಸಹಾಯವಾಗುತ್ತದೆ’ ಎಂದು ಹೇಳಿದರು.

‘ಇತರೆ ಆ್ಯಪ್ಗಳಲ್ಲಿ ಜನರ ಓಡಾಟ ಹೆಚ್ಚಿರುವ ಸಮಯದಲ್ಲಿ ಹೆಚ್ಚಿನ ದರ ವಿಧಿಸುತ್ತಾರೆ. ಆದರೆ, ನಮ್ಮಲ್ಲಿ ಎಲ್ಲಾ ಸಮಯದಲ್ಲೂ ಒಂದೇ ರೀತಿಯ ದರ ಇರುತ್ತದೆ. ಟ್ರಸ್ಟ್ ಗ್ರಾಹಕರು ಬುಕ್ಕಿಂಗ್ ಸಮಯದಲ್ಲಿ ನೀಡುವ ₹3ನ್ನಷ್ಟೇ ಪಡೆಯುತ್ತದೆ. ಪ್ರಯಾಣ ದರವನ್ನು ಚಾಲಕರಿಗೆ ನೀಡಲಿದ್ದು, ಯಾವುದೇ ಕಮಿಷನ್ ಪಡೆಯುವುದಿಲ್ಲ’ ಎಂದರು.

ಸಾವಿರ ಆಟೊಗಳಿಗೆ ಅಳವಡಿಕೆ

ಮೈಸೂರು ಆಟೊರಿಕ್ಷಾ ಸರ್ವೀಸ್ ಟ್ರಸ್ಟ್ ಈ ಆ್ಯಪ್ ಅನ್ನು ನಗರದ ಸಾವಿರ ಆಟೊಗಳಿಗೆ ಅಳವಡಿಸಿದ್ದು ಜನರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ‘ನಗರದಲ್ಲಿ ಸುಮಾರು 35 ಸಾವಿರ ಆಟೊಗಳು ಓಡಾಡುತ್ತವೆ. ಅವರೆಲ್ಲರೂ ಈ ಆ್ಯಪ್ ಬಳಸಿದರೆ ಇತರೆ ಆ್ಯಪ್ಗಳಿಂದಾಗುವ ವಂಚನೆಗಳಿಂದ ದೂರವಿರಬಹುದು. ಸದ್ಯಕ್ಕೆ 10 ಜನರ ತಂಡ ಇದನ್ನು ನಿರ್ವಹಿಸುತ್ತಿದ್ದು ಕೆಲವೇ ದಿನಗಳಲ್ಲಿ ಕಚೇರಿ ತೆರೆದು ಶಾಶ್ವತ ವ್ಯವಸ್ಥೆ ಮಾಡಲಿದ್ದೇವೆ. ನಗರ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಬಂದರೆ ಎಲ್ಲಾ ಜಿಲ್ಲೆಗಳಿಗೂ ಈ ವ್ಯವಸ್ಥೆವನ್ನು ವಿಸ್ತರಿಸಲಿದ್ದೇವೆ’ ಎಂದು ನಾಗರಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.