ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ‘ಸೂಕ್ಷ್ಮ ಪ್ರದೇಶ’ದಲ್ಲಿ ಪ್ರವಾಸೋದ್ಯಮಕ್ಕಾಗಿ ಅರಣ್ಯ ಇಲಾಖೆಯೇ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ವ್ಯಕ್ತವಾಗಿದೆ.

ಕೋರ್ ಕ್ರಿಟಿಕಲ್ (ನಿರ್ಣಾಯಕ) ಹುಲಿ ಆವಾಸಸ್ಥಾನವಾದ ಅರಣ್ಯದಲ್ಲಿರುವ ‘ಹರಿಣಿ ಕಾಟೇಜ್’ನಲ್ಲಿ ದುರಸ್ತಿ ಹಾಗೂ ಪುನರ್ನವೀಕರಣ ಮಾಡಿರುವುದಾಗಿ ಸಂರಕ್ಷಿತ ಪ್ರದೇಶದ ಇನ್ಸ್ಟಾಗ್ರಾಂ ಖಾತೆಯಲ್ಲಿ (https://www.instagram.com/bandipur_tr/) ಪ್ರಕಟವಾಗಿದ್ದು, ಹೊಸ ಸೌಲಭ್ಯಗಳ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.

ಪ್ರವಾಸಿಗರಿಗೆ ಯಾವುದೇ ಹೊಸ ಕಟ್ಟಡ ನಿರ್ಮಿಸಬಾರದು ಹಾಗೂ ಪ್ರವಾಸೋದ್ಯಮ ಉದ್ದೇಶಕ್ಕಾಗಿ ಇರುವ ಎಲ್ಲ ಕಟ್ಟಡಗಳನ್ನು ಹೊರಗೆ ಹಾಕುವಂತೆ ಅಜಯ್ ದುಬೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಎನ್ಟಿಸಿಎ ಕೂಡ ಈ ತೀರ್ಪು ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅನುಸಾರ ಮಾರ್ಗಸೂಚಿಗಳನ್ನು ರೂಪಿಸಿದ್ದು, 2019ರ ಅ.19ರಂದು ಹೊರಡಿಸಿರುವ ಸುತ್ತೋಲೆಯಲ್ಲೂ ‘ನಿರ್ಣಾಯಕ ಹುಲಿ ಆವಾಸಸ್ಥಾನಗಳಲ್ಲಿ ಕಾಯಂ ಪ್ರವಾಸಿ ಸೌಲಭ್ಯಗಳನ್ನು ನಿರ್ದಿಷ್ಟ ಕಾಲಾವಧಿಯೊಳಗೆ ಹೊರವಲಯಕ್ಕೆ ಸ್ಥಳಾಂತರಿಸಬೇಕು’ ಎಂದಿದೆ.

‘ಪೆಟ್ರೋಲಿಂಗ್ ಕ್ಯಾಂಪ್ಗಳು, ಚೌಕಿಗಳು ಹಾಗೂ ವೀಕ್ಷಣಾ ಗೋಪುರ ಸೌಲಭ್ಯವನ್ನು ಪ್ರವಾಸಿಗರು ಬಳಸುವಂತಿಲ್ಲ. ರಾತ್ರಿ ತಂಗುದಾಣಗಳನ್ನು ಕಾಲಮಿತಿಯಲ್ಲಿ ಕಾಯಂ ಆಗಿ ಸ್ಥಳಾಂತರ ಮಾಡಬೇಕು’ ಎಂದೂ ಹೇಳಿದೆ.

ಆದರೆ, ಹರಿಣಿ ಕಾಟೇಜ್ನಲ್ಲಿ ಗಾಜಿನ ಕಿಟಕಿಯ ಹಜಾರದ ಗ್ಯಾಲರಿ ಸೌಲಭ್ಯವನ್ನು ಪ್ರವಾಸಿಗರಿಗೆ ಹೊಸದಾಗಿ ನೀಡಲಾಗಿದೆ. ಈ ಕಾಟೇಜ್ 1959ರ ಮೇ 4ರಂದು ಆಗಿನ ಕೇಂದ್ರ ಕೃಷಿ ಸಚಿವ ಪಂಜಾಬ್ರಾವ್ ದೇಶ್ಮುಖ್ ಉದ್ಘಾಟಿಸಿದ್ದರು. ಪಾರಂಪರಿಕ ಶೈಲಿಯಲ್ಲಿದ್ದ ಈ ಕಟ್ಟಡವನ್ನು ನವೀಕರಿಸಿದ್ದು, ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ. ಅದಕ್ಕಾಗಿ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸೂಕ್ಷ್ಮ ಪ್ರದೇಶದಲ್ಲಿದ್ದ ಸಫಾರಿ ಟಿಕೆಟ್ ಕೌಂಟರ್ಗಳನ್ನು ಎನ್ಟಿಸಿಎ ಮಾರ್ಗಸೂಚಿಯಂತೆ ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಲಾಗಿದೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ನಿಯಮ ಉಲ್ಲಂಘಿಸಿದ್ದಲ್ಲದೆ, ಇನ್ಸ್ಟಾಗ್ರಾಂ ಮೂಲಕ ಪ್ರಚಾರವನ್ನೂ ಮಾಡುತ್ತಿರುವುದು ಎಷ್ಟು ಸರಿ? ಕೂಡಲೇ ಹೊಸ ಕಟ್ಟಡ ನೆಲಸಮ ಮಾಡಬೇಕು. ತಪ್ಪಿತಸ್ಥ ಸಿಎಫ್, ಎಸಿಎಫ್ ಹಾಗೂ ಆರ್ಎಫ್ಒ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಪ್ರಮೋದ್.

‘ಯೋಜನೆಯಂತೆ ನಡೆದಿದೆ’

‘ಕಾಟೇಜ್ 1973ರಿಂದಲೂ ಇದ್ದು ಇದೀಗ ನವೀಕರಣ ಮಾಡಲಾಗಿದೆ. ಕ್ರಿಯಾ ಯೋಜನೆಯಂತೆಯೇ ಈಗಾಗಲೇ ಇದ್ದ ಕಟ್ಟಡ ಪುನರುಜ್ಜೀವನಗೊಳಿಸಲಾಗಿದೆ. ಹೊಸ ಕಟ್ಟಡವೇನೂ ಕಟ್ಟಿಲ್ಲ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಕೆ. ಮಾಲ್ಖಡೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.