ಮೈಸೂರು: ಮಂಗಳವಾರ ಇಲ್ಲಿ ಆರಂಭವಾದ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ದೇಶ, ವಿದೇಶದ ನೂರಾರು ಭಿಕ್ಕುಗಳ ಸಮ್ಮುಖದಲ್ಲಿ ಸಾವಿರಾರು ಜನರು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬುದ್ಧ- ಅಂಬೇಡ್ಕರ್ ಮಾರ್ಗ ಅನುಸರಣೆ ಮಾಡುವ ಸಂಕಲ್ಪ ಮಾಡಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಮ್ಮೇಳನವನ್ನು ಮಯನ್ಮಾರ್ನ ಭಿಕ್ಕು ಪನಿಂದ ಸಯಡೊ ಉದ್ಘಾಟಿಸಿದರು. 500ಕ್ಕೂ ಹೆಚ್ಚು ಪರಿಶಿಷ್ಟ ಕುಟುಂಬದವರು ಬೌದ್ಧ ಧರ್ಮ ಸ್ವೀಕರಿಸಿದರು.

‘ಶೂದ್ರರು, ದಲಿತರು ಇಂಗ್ಲಿಷ್ ಮಾಧ್ಯಮದಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಹಿಂದೂ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಿಂದ ವಿಮೋಚನೆ ಪಡೆಯಬಹುದು. ಬೌದ್ಧ ವಿಹಾರಗಳಲ್ಲಿ ಇಂಗ್ಲಿಷ್ ಕಲಿಕೆ, ಅಂಬೇಡ್ಕರ್ ಓದು ನಡೆಯಬೇಕು’ ಎಂದು ಚಿಂತಕ ಕಾಂಚಾ ಐಲಯ್ಯ ಪ್ರತಿಪಾದಿಸಿದರು.

‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನಿಜವಾದ ಬೌದ್ಧ. ತಮ್ಮತ್ತ ಶೂ ತೂರಿದವನ ಬಗ್ಗೆ ಕೋಪಗೊಳ್ಳದೇ ಕ್ಷಮಿಸಿದರು. ಇದಲ್ಲವೇ ಬುದ್ಧ ಹಾಗೂ ಅಂಬೇಡ್ಕರ್ ಮಾರ್ಗ’ ಎಂದರು.

ಭಿಕ್ಕುಗಳಾದ ಲಾವೋಸ್ನ ರಾಂಡಿಸೋಟ್, ವಿಯೆಟ್ನಾಂನ ತಿಚ್ಮಿನ್ ಹಾನ್, ನಳಂದ ವಿಶ್ವವಿದ್ಯಾಲಯದ ಧಮ್ಮಗುರು ಕರ್ಮ ರಾನ್ರಿಯನ್ ಪುಂಚೆ, ಅರುಣಾಚಲ ಪ್ರದೇಶದ ಭಂತೆ ವಿಸುದ್ದಶೀಲ, ಕೊಳ್ಳೇಗಾಲದ ಮನೋರಕ್ಖಿತ ಭಂತೇಜಿ, ಭಂತೆ ಬೋಧಿರತ್ನ, ಭಂತೆ ಮೈತ್ರಿಮಾತಾ ಅಮ್ಮ ಪಾಲ್ಗೊಂಡಿದ್ದರು.

ಅಸಮಾನತೆಯನ್ನು ಜೀವಂತವಾಗಿರಿಸುತ್ತಿರುವ ಆರ್ಎಸ್ಎಸ್ ಟೀಕಿಸುತ್ತಿರುವುದರಿಂದ ನನ್ನನ್ನು ಕೊಲ್ಲುವುದಾಗಿ ಹೇಳುತ್ತಾರೆ. ಇತಿಹಾಸದಲ್ಲಿ ಕೊಂದವರ ಹೆಸರು ಉಳಿಯುವುದಿಲ್ಲ. ಕೊಲೆಯಾದವರು ಮಹಾತ್ಮರಾಗಿದ್ದಾರೆ
ಕಾಂಚಾ ಐಲಯ್ಯ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.