ಮೈಸೂರು: ‘ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳ ಮೂಲಕ ಶ್ರೇಣಿ ವ್ಯವಸ್ಥೆ ಕಿತ್ತು ಹಾಕಬೇಕು. ಆ ಮೂಲಕ ಸಮ ಸಮಾಜ ನಿರ್ಮಿಸಬೇಕು’ ಎಂದು ನಟ ಚೇತನ್ ಅಹಿಂಸಾ ಪ್ರತಿಪಾದಿಸಿದರು.

ಬೌದ್ಧ ಮಹಾ ಸಮ್ಮೇಳನದಲ್ಲಿ ‘ಬೌದ್ಧ ಧರ್ಮ ಅಂಬೇಡ್ಕರ್ ಅವರಿಗೆ ಸಿಕ್ಕಿದ ಚಾರಿತ್ರಿಕ ಸಮರ್ಥನೆ– ನವಯಾನದ ದೃಷ್ಠಿಕೋನ’ ವಿಷಯದ ಕುರಿತು ಮಾತನಾಡಿ, ‘ಬೌದ್ಧ ಧರ್ಮವು ರಾಗ, ದ್ವೇಷ, ಮೋಹದಿಂದ ಹೊರಬಂದು ಸಾತ್ವಿಕ ಜೀವನ ನಡೆಸುವ ಪದ್ಧತಿ ಕಲಿಸುತ್ತಿದೆ’ ಎಂದರು.

‘ಎಷ್ಟು ಪುರಾತನ? ಅನುಯಾಯಿಗಳೆಷ್ಟಿದ್ದಾರೆ ಎಂಬುದರಿಂದ ಧರ್ಮವನ್ನು ಅಳೆಯಬಾರದು. ಸಮಾನತೆ, ನ್ಯಾಯ, ವೈಜ್ಞಾನಿಕತೆಯಿಂದ ಗುರುತಿಸಬೇಕು. ಬುದ್ಧನಿಂದ ಪ್ರೇರಣೆ ಪಡೆದು ಅಂಬೇಡ್ಕರ್ ಆರಂಭಿಸಿದ ನವಯಾನದಲ್ಲಿ ಈ ಎಲ್ಲಾ ಅಂಶಗಳಿರುವುದರಿಂದ ಅದೇ ಮನುಕುಲದ ಶ್ರೇಷ್ಠ ಧರ್ಮ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.