ಮೈಸೂರು: ‘ಉಪ್ಪಾರ ಸಮುದಾಯದ ಮುಖಂಡರ ಹೆಸರನ್ನು ಹೇಳಲಿಲ್ಲ, ವೇದಿಕೆಗೂ ಕರೆದಿಲ್ಲ’ ಎಂದು ಸಮುದಾಯದ ಕಾರ್ಯಕರ್ತರು ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯ ನಡುವೆಯೇ ವೇದಿಕೆ ಏರಿ ಅಸಮಾಧಾನ ವ್ಯಕ್ತಪಡಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ವರುಣ ಹಾಗೂ ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿಯು ನಗರದಲ್ಲಿ ಏರ್ಪಡಿಸಿದ್ದ ಸಭೆ
ಯಲ್ಲಿ ಕಾರ್ಯಕರ್ತರು, ‘ಸಮುದಾಯದವರಿಗೆ ಕ್ಷೇತ್ರದಲ್ಲಿ ಮಾನ್ಯತೆ ನೀಡುತ್ತಿಲ್ಲ’ ಎಂದು ದೂರಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಮಾತನಾಡುವಾಗ ಈ ಘಟನೆ ನಡೆಯಿತು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಮಾಧಾನ ಪಡಿಸಲು ಯತ್ನಿಸಿದರು. ಕಾರ್ಯಕರ್ತರು ಜೋರು ಧ್ವನಿಯಲ್ಲಿ ಮಾತು ಮುಂದುವರಿಸಿದಾಗ ಕೋಪದಿಂದ ಹೊರಹಾಕುವುದಾಗಿ ಎಚ್ಚರಿಸಿದರು. ಕಾರ್ಯಕರ್ತರು ಹೊರಹೋದ ನಂತರ ಮಹದೇವಪ್ಪ ಭಾಷಣ ಮುಂದುವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.