ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರೀಕ್ಷೆ ಬಿಡಿ, ಪಕ್ಷಕ್ಕಾಗಿ ತ್ಯಾಗ ಮಾಡಿ: ಬಿ.ಜೆ. ವಿಜಯ್‌ಕುಮಾರ್‌

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿಜೆವಿ
Published : 25 ಆಗಸ್ಟ್ 2024, 16:21 IST
Last Updated : 25 ಆಗಸ್ಟ್ 2024, 16:21 IST
ಫಾಲೋ ಮಾಡಿ
Comments

ಮೈಸೂರು: ‘ಪಕ್ಷದಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಕ್ಕಿಂತ ಬಲವರ್ಧನೆಗೆ ಶ್ರಮಿಸುವುದು ಹಾಗೂ ತ್ಯಾಗ ಮಾಡುವುದು ಸಾರ್ಥಕತೆ ನೀಡುತ್ತದೆ’ ಎಂದು ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ತಿಳಿಸಿದರು.

ಇಲ್ಲಿನ ಇಂದಿರಾ ಕಾಂಗ್ರೆಸ್ ಭವನದಲ್ಲಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸೇವಾದಳ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ವಿಭಾಗ ಮತ್ತು ಸಫಾಯಿ ಕರ್ಮಚಾರಿಗಳ ವಿಭಾಗಗಳ ಸರಣಿ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಕ್ಷದ ಬಲವರ್ಧನೆಗೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ರಣತಂತ್ರಗಳನ್ನು ರೂಪಿಸುವ ಸಲುವಾಗಿ ಕಾರ್ಯಕಾರಿಣಿ ನಡೆಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಸ್ಪಷ್ಟ ಸೂಚನೆ ಮೇರೆಗೆ, ನಿಷ್ಕ್ರಿಯ ಘಟಕಗಳನ್ನು ವಿಸರ್ಜಿಸಿ ಅಂತಹ ಘಟಕಗಳಿಗೆ ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಿಸಿ ಸಕ್ರಿಯಗೊಳಿಸಲಾಗುವುದು’ ಎಂದರು.

‘ಸೇವಾದಳದ ಕೆಲಸ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಬೇಕು’ ಎಂದು ಸೂಚಿಸಿದರು.

ಜಾಗೃತಿ ಮೂಡಿಸಿ: ‘ಪರಿಶಿಷ್ಟ ಪಂಗಡ ವಿಭಾಗ ಇನ್ನೂ ಹೆಚ್ಚು ರೀತಿಯಲ್ಲಿ ಕೆಲಸ ಮಾಡಿ ಸಮುದಾಯವನ್ನು ಪಕ್ಷದತ್ತ ಆಕರ್ಷಣೆ ಮಾಡಬೇಕು. ಹೆಚ್ಚಿನ ಪದಾಧಿಕಾರಿಗಳನ್ನು ನೇಮಿಸಿಕೊಂಡು ಯುವ ಸಮುದಾಯಕ್ಕೆ ಜಾಸ್ತಿ ಅವಕಾಶ ಕೊಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಪದಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯಲ್ಲಿ 900 ಪದಾಧಿಕಾರಿಗಳಿಗೆ ಅವಕಾಶ ಕಲ್ಪಿಸಬೇಕು. ನಮ್ಮ ಸರ್ಕಾರದಿಂದ ನೀಡುತ್ತಿರುವ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಾಕೀತು ಮಾಡಿದರು.

‘ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ ಗಳಿಸುವ ಆಕಾಂಕ್ಷಿ ಇರುವಂತಹ ಪದಾಧಿಕಾರಿಗಳು ಮೊದಲು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಗುರುತಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಪಕ್ಷದಲ್ಲಿ ಕೆಲಸ ಮಾಡಿದ್ದ ಮುಖಂಡರು ಈಗ ಕಾರಣಾಂತರಗಳಿಂದ ಪಕ್ಷದಿಂದ ದೂರ ಸರಿದಿದ್ದಾರೆ. ಅಂಥವರನ್ನು ಗುರುತಿಸಿ ಮತ್ತೆ ಮರಳಿ ಕಾಂಗ್ರೆಸ್ ಎಂಬ ಅಭಿಯಾನದಡಿ ಕರೆತರಬೇಕು’ ಎಂದು ತಿಳಿಸಿದರು.

ಡಿಸಿಸಿ ಉಪಾಧ್ಯಕ್ಷರಾದ ಹೆಡತಲೆ ಮಂಜುನಾಥ್, ಶಿವಕುಮಾರ್, ನೈಮೂರು ರೆಹಮಾನ್, ಮಹದೇವ್, ಪ್ರಧಾನ ಕಾರ್ಯದರ್ಶಿಗಳಾದ ಎಂ. ಶಿವಪ್ರಸಾದ್, ಉತ್ತನಹಳ್ಳಿ ಶಿವಣ್ಣ,  ಸೇವಾದಳದ ಜಿಲ್ಲಾಧ್ಯಕ್ಷ ಸಾ.ಮ. ಯೋಗೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಸಿನ್ ಖಾನ್, ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಮಹೇಶ್ ನಾಗವಾಲ, ಜಿಲ್ಲಾ ಸಫಾಯಿ ಕರ್ಮಾಚಾರಿ ವಿಭಾಗದ ಅಧ್ಯಕ್ಷ ನಾಗರಾಜ್, ಹುಣಸೂರು ಬಸವಣ್ಣ, ಎನ್. ಲಕ್ಷ್ಮಣ್, ಎನ್ಆರ್‌ಎಂ ಮಂಜು, ಪಾಲಾಕ್ಷ್ ಗೌಡ, ಚಂದ್ರು, ಗುರು, ಪ್ರವೀಣ್ ತೇಜ, ಮುರುಡೇಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT