ಮೈಸೂರು: ಈ ಬಾರಿಯ ದಸರೆಯಲ್ಲಿ ಬನ್ನಿಮಂಟಪದಲ್ಲಿ ವಾರಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲಾಡಳಿತವು ಪ್ರತಿ ಕಾರ್ಯಕ್ರಮಕ್ಕೂ ಪಾಸ್ ಕಡ್ಡಾಯಗೊಳಿಸಿದೆ. ಸಾರ್ವಜನಿಕರಿಗೆ ಸುಲಭದಲ್ಲಿ ಪ್ರವೇಶ ಸಿಗುವುದು ಅನುಮಾನವಾಗಿದೆ.

ಈ ವರ್ಷ ಪಂಜಿನ ಕವಾಯತು ಜೊತೆಗೆ 4 ದಿನ ಕಾಲ ಡ್ರೋನ್ ಷೋ ನಡೆಯಲಿದೆ. ಸುಮಾರು 3 ಸಾವಿರದಷ್ಟು ಡ್ರೋಣ್ಗಳು ಆಕಾಶದಲ್ಲಿ ಚಿತ್ತಾರ ಬಿಡಿಸಲಿವೆ. ಇದಲ್ಲದೆ, ಎರಡು ದಿನ ವೈಮಾನಿಕ ಪ್ರದರ್ಶನವೂ ಇರಲಿದ್ದು ಆಗಸದಲ್ಲಿ ಲೋಹದ ಹಕ್ಕಿಗಳು ನೋಡುಗರನ್ನು ರಂಜಿಸಲಿವೆ.

ಈ ಮೊದಲು ವೈಮಾನಿಕ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿತ್ತು. ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಮಾತ್ರ ಪಾಸ್ ಮೂಲಕ ಪ್ರವೇಶ ಕಲ್ಪಿಸಲಾಗುತ್ತಿತ್ತು. ಕಳೆದ ವರ್ಷದಿಂದ ದಸರಾದಲ್ಲಿ ಬನ್ನಿಮಂಟಪದಲ್ಲಿ ಡ್ರೋನ್ ಷೋ ಪರಿಚಯಿಸಿದ್ದು, ಅಕ್ಟೋಬರ್ 6 ಹಾಗೂ 7ರಂದು ನಡೆದ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ದೊರೆತಿತ್ತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದ ಬಿಸಿ ಈ ಬಾರಿ ದಸರೆಗೂ ತಟ್ಟಿದೆ. ಅರಮನೆ ಆವರಣದಲ್ಲಿ ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಯಲ್ಲಿ ಒಟ್ಟು ಆಸನಗಳ ಸಾಮರ್ಥ್ಯವನ್ನು 11 ಸಾವಿರದಷ್ಟು ಕಡಿತಗೊಳಿಸಲಾಗಿದೆ. ಜೊತೆಗೆ ಬನ್ನಿಮಂಟಪಕ್ಕೂ ಸೀಮಿತ ಸಂಖ್ಯೆಯಲ್ಲಿ ಪ್ರವೇಶ ನೀಡಲು ತೀರ್ಮಾನಿಸಲಾಗಿದ್ದು, ಪಾಸ್ ಮೂಲಕ ನಿರ್ದಿಷ್ಟ ಸಂಖ್ಯೆಯ ಜನರನ್ನು ಮಾತ್ರ ಒಳಬಿಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜಕಾರಣಿಗಳ ಕೈಗೆ ಪಾಸ್:

ಜಿಲ್ಲಾಡಳಿತವು ಸಾರ್ವಜನಿಕರಿಗೆ ನೇರವಾಗಿ ಪಾಸ್ ವಿತರಿಸುವ ಬದಲು ರಾಜಕಾರಣಿಗಳ ಕೈಗೆ ಪಾಸ್ ನೀಡಲು ಮುಂದಾಗಿದೆ. ಬನ್ನಿಮಂಟಪದ ಪ್ರತಿ ಕಾರ್ಯಕ್ರಮಕ್ಕೂ 30 ಸಾವಿರದಷ್ಟು ಪಾಸ್ಗಳನ್ನು ಮುದ್ರಿಸಲಾಗುತ್ತಿದ್ದು, ಇದನ್ನು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ಜನಪ್ರತಿನಿಧಿಗಳ ಕೈಗೆ ನೀಡಲಾಗುತ್ತಿದೆ. ಅವರು ಜನರಿಗೆ ಹಂಚಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಕಾರಣಿಗಳ ಕೈಗೆ ಪಾಸ್ ನೀಡಿಕೆ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

- ಡ್ರೋನ್ಷೋಗೂ ಟಿಕೆಟ್: ಆನ್ಲೈನ್ನಲ್ಲಿ ಮಾರಾಟ ಇದೇ ಮೊದಲ ಬಾರಿಗೆ ಡ್ರೋನ್ ಶೋಗೆ ಜಿಲ್ಲಾಡಳಿತವು ಟಿಕೆಟ್ ನಿಗದಿಪಡಿಸಿದೆ. ಎರಡು ದಿನ ಕೇವಲ ಡ್ರೋನ್ ಪ್ರದರ್ಶನ ಇರಲಿದ್ದು ಪ್ರತಿ ದಿನದ ಟಿಕೆಟ್ಗೆ ₹1 ಸಾವಿರ ದರವಿದೆ. ಅ. 2ರಂದು ರಾತ್ರಿ ನಡೆಯಲಿರುವ ಪಂಜಿನ ಕವಾಯತು ಪ್ರದರ್ಶನಕ್ಕೆ ₹1500 ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ. ಅಕ್ಟೋಬರ್ 2ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ ₹3500 ದರವಿದೆ. ಅಲ್ಲದೆ ದಸರಾ ಗೋಲ್ಡ್ಕಾರ್ಡ್ಗೆ ₹6500 ಬೆಲೆ ಇದೆ. ಈ ಎಲ್ಲ ಟಿಕೆಟ್ಗಳೂ ದಸರಾದ ಅಧಿಕೃತ ವೆಬ್ಸೈಟ್ mysoredasara.gov.in ರಲ್ಲಿ ಸಿಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.