ಮೈಸೂರು: ‘ಶಕ್ತಿ’ ಯೋಜನೆ ಜಾರಿಯಾದಾಗಿನಿಂದ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದಾರೆ. ಫೆ.20ರಿಂದ ಮೈಸೂರು–ಚಾಮರಾಜನಗರ ಜಿಲ್ಲೆಯಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದೆ.

ಶನಿವಾರ ನಡೆದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಖಾಸಗಿ ಬಸ್ಗಳ ಮಾಲೀಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೈಸೂರು ಸಂಘದ ಅಧ್ಯಕ್ಷ ಕೆ. ಶಿವಲಿಂಗು ಹಾಗೂ ಚಾಮರಾಜನಗರ ಸಂಘದ ಅಧ್ಯಕ್ಷ ಅನ್ವರ್ ಪಾಷ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಈ ದರ ಏರಿಕೆಯ ತೀರ್ಮಾನಕ್ಕೆ ಬಂದಿದೆ. ಸರಾಸರಿ ಶೇ 5ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದಾಗಿ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.

‘ಕೋವಿಡ್ ತರುವಾಯ ಎರಡೂ ಜಿಲ್ಲೆಗಳ ಖಾಸಗಿ ಬಸ್ ಉದ್ಯಮವು ನಷ್ಟಕ್ಕೆ ಸಿಲುಕಿದೆ. ಅದರಿಂದ ಕೊಂಚವಾದರೂ ಸುಧಾರಿಸಿಕೊಳ್ಳುವ ಸಲುವಾಗಿ 2022ರಲ್ಲಿಯೇ ಪ್ರಯಾಣ ದರ ಏರಿಕೆಯ ತೀರ್ಮಾನಕ್ಕೆ ಬಂದಿದ್ದೆವು. ಆದರೆ, ಪೂರ್ಣವಾಗಿ ಜಾರಿಗೊಳಿಸಿರಲಿಲ್ಲ. ಇದೀಗ ಮತ್ತೊಮ್ಮೆ ದರ ಏರಿಕೆಯನ್ನು ಸಂಘವು ಅನುಮೋದಿಸಿದ್ದು, ಫೆ.20ರಿಂದಲೇ ಅನ್ವಯ ಆಗುವಂತೆ ಜಾರಿಗೆ ತರಲು ತೀರ್ಮಾನಿಸಿದ್ದೇವೆ’ ಎಂದು ಮೈಸೂರು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶಿವಲಿಂಗು ತಿಳಿಸಿದರು.

‘ದಿನೇ ದಿನೇ ಡೀಸೆಲ್ ದರ ಏರಿಕೆ ಜೊತೆಗೆ ಬಸ್ ಬಿಡಿಭಾಗಗಳು, ವಾಹನ ವಿಮೆ ಹಾಗೂ ಟೋಲ್ ಹೆಚ್ಚಳದಿಂದಾಗಿ ಈ ದರ ಏರಿಕೆಯು ಅನಿವಾರ್ಯವಾಗಿತ್ತು. ಈಗಲೂ ಕೆಎಸ್ಆರ್ಟಿಸಿ ಬಸ್ಗಳಿಗೆ ಹೋಲಿಸಿದರೆ ಖಾಸಗಿ ಬಸ್ಗಳ ದರ ಕಡಿಮೆ ಇದೆ’ ಎಂದು ಹೇಳಿದರು.

ನಷ್ಟದ ಹಾದಿ: ಹಿಂದೊಮ್ಮೆ ಮೈಸೂರು– ಚಾಮರಾಜನಗರ– ಕೊಳ್ಳೇಗಾಲ ಭಾಗದಲ್ಲಿ ಖಾಸಗಿ ಬಸ್ಗಳ ಸೇವೆ ಏಕಚಕ್ರಾಧಿಪತ್ಯ ಸ್ಥಾಪಿಸಿತ್ತು. ಆದರೆ, ಹಂತಹಂತವಾಗಿ ಕೆಎಸ್ಆರ್ಟಿಸಿ ಬಸ್ ಸೇವೆ ವಿಸ್ತರಿಸಿದ್ದು, ಇದರಿಂದಾಗಿ ಕ್ರಮೇಣ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿದೆ.

ಕೋವಿಡ್ ನಂತರದಲ್ಲಿ ಅರ್ಧದಷ್ಟು ಬಸ್ಗಳು ಸೇವೆಯನ್ನೇ ಬಂದ್ ಮಾಡಿವೆ. ‘ಶಕ್ತಿ’ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಖಾಸಗಿ ಬಸ್ಗಳಿಂದ ವಿಮುಖವಾಗಿದ್ದು, ಬಹುತೇಕ ಬಸ್ ಮಾಲೀಕರು ನಷ್ಟದ ಹಾದಿಯಲ್ಲಿದ್ದಾರೆ.

‘ನಾಲ್ಕೈದು ವರ್ಷಗಳ ಹಿಂದೆ ಈ ಮಾರ್ಗಗಳಲ್ಲಿ 110–120 ಖಾಸಗಿ ಬಸ್ಗಳು ನಿತ್ಯ ಸಂಚರಿಸುತ್ತಿದ್ದವು. ಈಗ ಇವುಗಳ ಸಂಖ್ಯೆ 50–60ಕ್ಕೆ ಇಳಿದಿದೆ. ಏಳೆಂಟು ಬಸ್ ಹೊಂದಿದ್ದವರು ಮೂರ್ನಾಲ್ಕು ವಾಹನ ಓಡಿಸುತ್ತಿದ್ದಾರೆ. ಒಂದು–ಎರಡು ಬಸ್ ಇದ್ದವರು ಸೇವೆಯನ್ನು ಬಂದ್ ಮಾಡಿ ಬೇರೆ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ’ ಶಿವಲಿಂಗು ತಿಳಿಸಿದರು.

‘ಕಳೆದ ಒಂದೂವರೆ ವರ್ಷದಿಂದ ಬಹುತೇಕ ಮಹಿಳಾ ಪ್ರಯಾಣಿಕರು ಈ ಬಸ್ಗಳಿಂದ ದೂರವಾಗಿದ್ದಾರೆ. ನಿತ್ಯ ಓಡಾಡುತ್ತಿದ್ದ ಶಿಕ್ಷಕರು, ಬ್ಯಾಂಕ್ ಹಾಗೂ ಸರ್ಕಾರಿ ಉದ್ಯೋಗಿ ಪ್ರಯಾಣಿಕರು ಕಡಿಮೆ ಆಗಿದ್ದಾರೆ. ಇದೆಲ್ಲದರಿಂದ ಒಟ್ಟಾರೆ ಆದಾಯ ಕುಸಿಯುತ್ತಿದೆ. ಶುಭ ಸಮಾರಂಭಗಳು, ಪ್ರವಾಸ– ಸಮಾವೇಶಗಳ ಸೇವೆಯಿಂದ ಒಂದಿಷ್ಟು ಆದಾಯ ಬರುತ್ತಿದೆ’ ಎಂದು ಬಸ್ ಮಾಲೀಕರು ಹೇಳುತ್ತಾರೆ.

ನಷ್ಟ ಸರಿದೂಗಿಸುವ ಸಲುವಾಗಿ 2022ರಲ್ಲೇ ಪ್ರಯಾಣ ದರ ಏರಿಕೆಗೆ ತೀರ್ಮಾನಿಸಿದ್ದು ಜಾರಿಯಾಗಿರಲಿಲ್ಲ. ಫೆ.20ರಿಂದ ಜಾರಿಗೆ ನಿರ್ಧರಿಸಿದ್ದೇವೆ. ಶೇ 5ರಷ್ಟು ದರ ಹೆಚ್ಚಾಗಲಿದೆ
ಶಿವಲಿಂಗು ಅಧ್ಯಕ್ಷ ಮೈಸೂರು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.