ಮೈಸೂರು: ಗಾಂಧಿ ಜಯಂತಿ ಅಂಗವಾಗಿ ಇಲ್ಲಿನ ಪುರಭವನದಲ್ಲಿ ಗುರುವಾರ ಸರ್ವ ಧರ್ಮದ ಪ್ರಾರ್ಥನಾ ಸಭೆ ನಡೆಸಲಾಯಿತು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಧರ್ಮಗಳ ಧರ್ಮಗುರುಗಳು ತಮ್ಮ ಧರ್ಮದ ಸಂದೇಶಗಳನ್ನು ಬೋಧನೆ ಮಾಡಿದರು.

ಹಿಂದೂ ಧರ್ಮದಿಂದ ಸ್ವಾಮಿ ಆಘರಾನಂದ ರಾಮಕೃಷ್ಣ ರಾವ್, ಇಸ್ಲಾಂ ಧರ್ಮದಿಂದ ಸೂಫಿ ನೂರಿ ಬಾಬಾ, ಜೈನ ಧರ್ಮದಿಂದ ಸುರೇಶ್ ಕುಮಾರ್ ಜೈನ್, ಸಿಖ್ ಧರ್ಮದಿಂದ ಸಾವನ್ ಸಿಂಗ್ ಗಾಂಧೀಜಿಯವರ ಆತ್ಮ ಕಥನ ಪಠಣ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರೌಢಶಾಲಾ ವಿಭಾಗ, ಪದವಿಪೂರ್ವ ಶಿಕ್ಷಣ ಹಾಗೂ ಪದವಿ, ಸ್ನಾತಕೋತ್ತರ ಪದವಿ ಮಟ್ಟದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಬಿ.ಎಚ್.ಎಸ್. ಮೇದಿನಿ, ತಿ.ನರಸೀಪುರ ತಾಲ್ಲೂಕಿನ ಸಿದ್ಧರಾಜು ಪ್ರಥಮ ಸ್ಥಾನ ಗಳಿಸಿದ್ದು ₹ 3ಸಾವಿರ ಮೊತ್ತವನ್ನು ವಿತರಿಸಲಾಯಿತು. ಕನಕಗಿರಿಯ ಸರ್ಕಾರಿ ಪ್ರೌಡಶಾಲೆ (ಆರ್.ಎಂ.ಎಸ್.ಎ.)ಯ ಭೂಮಿಕಾ ದ್ವಿತೀಯ ಸ್ಥಾನ ಗಳಿಸಿದ್ದು, ಅವರಿಗೆ ₹2ಸಾವಿರ ಮೊತ್ತವನ್ನು ವಿತರಿಸಲಾಯಿತು. ಪುಟ್ಟೇಗೌಡನಹುಂಡಿ ಶಾಲೆಯ ಸಹನಾ ಆರ್. ತೃತೀಯ ಸ್ಥಾನ ಗಳಿಸಿದ್ದು, ಅವರಿಗೆ ₹ 1ಸಾವಿರ ಬಹುಮಾನ ನೀಡಲಾಯಿತು.

ಪದವಿಪೂರ್ವ ಶಿಕ್ಷಣ ವಿಭಾಗದಲ್ಲಿ ಮರಿಮಲ್ಲಪ್ಪ ಕಾಲೇಜಿನ ನಕ್ಷತ್ರ ಪ್ರಥಮ (₹ 3,000), ಮಹಾರಾಣಿ ಕಾಲೇಜಿನ ಧನಲಕ್ಷ್ಮಿ ದ್ವಿತೀಯ (₹ 2,000), ಅನಿಕೇತನ ಪದವಿಪೂರ್ವ ಕಾಲೇಜಿನ ಶ್ರಾವ್ಯಾ ತೃತೀಯ (₹1,000) ಸ್ಥಾನ ಗಳಿಸಿದರು.

ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೃಷ್ಟಿ ಪ್ರಥಮ (₹3,000), ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಮತಾ ಎಸ್. (₹2ಸಾವಿರ) ಹಾಗೂ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಕೃತಿ ತೃತೀಯ (₹ 1ಸಾವಿರ) ಬಹುಮಾನ ಪಡೆದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ವಿನೋದ್ ಚಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.