ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಶಾಸ್ತ್ರೀಯ ಭಾಷಣ: ಕೃಷ್ಣಗೆ ಚಿನ್ನ

Published 28 ಮಾರ್ಚ್ 2024, 15:47 IST
Last Updated 28 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಮೈಸೂರು: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅಯೋಧ್ಯೆಯಲ್ಲಿ ಈಚೆಗೆ ಆಯೋಜಿಸಿದ್ದ 61ನೇ ಅಖಿಲ ಭಾರತ ಸಂಸ್ಕೃತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಇಲ್ಲಿನ ಅಗ್ರಹಾರದ ಕೃಷ್ಣ ಪಿ. ಬಾದರಾಯಣ ಸಾಧನೆ ತೋರಿದ್ದಾರೆ.

ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆ (ಪ್ರಾಚೀನ ವಿಜ್ಞಾನದಲ್ಲಿ ಪ್ರಬಂಧನ ವಿಧಿ- ವಿಷಯ)ಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಅವರಿಗೆ ಪ್ರಶಂಸಾಪತ್ರದೊಂದಿಗೆ ₹12 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗಿದೆ.

ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ 30ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆ, ಗುರುಕುಲಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಯೋಧ್ಯೆಯ ಶ್ರೀರಾಮನ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ, ಶ್ರೀರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ನೃತ್ಯ ಗೋಪಾಲದಾಸ ಸ್ವಾಮೀಜಿ, ರಾಮ ಜನ್ಮಭೂಮಿ ನ್ಯಾಸ ಕ್ಷೇತ್ರದ ಮಹಾಸಚಿವ ಚಂಪತ್ ರಾಯ, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ವರಖೇಡಿ ಬಹುಮಾನ ವಿತರಿಸಿದರು.

ಕೃಷ್ಣ ಅವರು ಬೆಂಗಳೂರಿನ ಸಂಸ್ಕೃತ ವಿವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಾಚೀನ ಭಾರತೀಯ ರಾಸಾಯನಶಾಸ್ತ್ರ ವಿಷಯದ ಬಗ್ಗೆ ಭಾಷಣ ಮಾಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಇವರು, ಉತ್ತರಾದಿ ಮಠದ ವಿದ್ವಾಂಸ ಬಾದರಾಯಣಾಚಾರ್ಯ–ಭಾಗ್ಯಶ್ರೀ ದಂಪತಿಯ ಪುತ್ರ. ಸಂಸ್ಕೃತ ವೇದ–ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT