ಕೆ.ಆರ್.ನಗರ: ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹12.11ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಎಂ.ಪ್ರಕಾಶ್ ಹೇಳಿದರು.

ಇಲ್ಲಿನ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಶನಿವಾರ ನಡೆದ 99ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ವರ್ಷ ಸಂಘ 100ವರ್ಷ ಪೂರೈಸುವುದರಿಂದ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ, ಅದಕ್ಕಾಗಿ ₹3.62ಲಕ್ಷ ಮೀಸಲು ಇಡಲಾಗಿದೆ ಎಂದರು.

ಷೇರುದಾರ ಸದಸ್ಯರಿಗೆ ಶೇ 10ರಷ್ಟು ಲಾಭಾಂಶ ನೀಡಲಾಗುತ್ತಿದೆ. ಸಂಘದ ಸದಸ್ಯರಿಂದ ₹32ಲಕ್ಷ ಠೇವಣಿ ಸಂಗ್ರಹಿಸಲಾಗಿದ್ದು, ಸಾಮಾನ್ಯ ಸದಸ್ಯರಿಗೆ ಶೇ 8.5ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ 9ರಷ್ಟು ಠೇವಣಿಗೆ ಬಡ್ಡಿ ನೀಡಲಾಗುತ್ತಿದೆ ಎಂದರು.

ಮರಣ ಹೊಂದಿರುವ ಸದಸ್ಯರ ಕುಟುಂಬಗಳಿಗೆ ಮರಣ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ ₹60 ಸಾವಿರ ವಿತರಣೆ ಮಾಡಲಾಗಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಸಂಘದ ಸಿಇಒ ಜಿ.ಡಿ.ರೇಣುಕಾಪ್ರಸನ್ನ ಅವರು ಸಭೆಯಲ್ಲಿ 2025-26ನೇ ಸಾಲಿನ ಆಯ ವ್ಯಯ ಮಂಡಿಸಿ ಅನುಮೋದನೆ ಪಡೆದರು.

ಸಂಘದ ಉಪಾಧ್ಯಕ್ಷ ಮೋಹನರಾವ್, ನಿರ್ದೇಶಕ ಕೆ.ಸಿ.ನಾಗರಾಜ್, ಸುಭಾಷ್, ಕೆ.ಎಲ್.ರಾಜೇಶ್, ಸಯ್ಯದ್ ಅಸ್ಲಂ, ಕೆ.ಎನ್.ಶಂಕರ್, ಅವಿನಾಶ್ ಪಿ.ಪಟೇಲ್, ಸಿ.ಎಂ.ಶಶಿಕಲಾ, ಕೆ.ಸಿ.ಶಿಲ್ಪಾ, ಎಂ.ಎ.ರವೀಂದ್ರಕುಮಾರ್, ಸಿಬ್ಬಂದಿ ಕೆ.ಪಿ.ಪಟೇಲ್, ಎಂ.ಎ.ರವೀಂದ್ರಕುಮಾರ್, ಎಂ.ವಿಶ್ವನಾಥ್, ಎನ್.ಜಿ.ಕವಿತಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.