ಹುಣಸೂರು: ‘2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆ’ ಎಂದು ತಾ.ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್ ಹೇಳಿದರು.

ತಾಲ್ಲೂಕಿನ ಮರದೂರು ಲಾ ಸೆಲೇಟ್ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಕುವೆಂಪು ವಿರಚಿತ ನಾಡಗೀತೆ 100 ವರ್ಷ ಪೂರೈಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ಮತ್ತು 1500 ವಿದ್ಯಾರ್ಥಿಗಳಿಂದ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ರಚಿಸಿದ ನಾಡಗೀತೆ ಕನ್ನಡಿಗರ ಅಸ್ಮಿತೆ. ಶಾಲಾ ಕಾಲೇಜುಗಳಲ್ಲಿ ನಾಡಗೀತೆ ಶತಮಾನೋತ್ಸವದಿಂದ ಭವಿಷ್ಯದ ಕುಡಿಗಳಲ್ಲಿ ಕನ್ನಡಾಭಿಮಾನ ಬೆಳೆಸಬೇಕು ಎಂದರು.

ಕಸಾಪ ಘಟಕದ ಉಪಾಧ್ಯಕ್ಷ ಮತ್ತು ರಂಗ ಕಲಾವಿದ ಜಯರಾಮ್, ಕಸಾಪ ಘಟಕದ ಮಾಜಿ ಅಧ್ಯಕ್ಷ ಸಾಯಿನಾಥ್, ಪ್ರಾಂಶುಪಾಲ ರವಿ ದೀಪಕ್ ಮಾತನಾಡಿದರು. ಸಿ.ಎಸ್.ಮಹೇಶ್ ಕನ್ನಡ ಗೀತ ಗಾಯನ ನಡೆಸಿಕೊಟ್ಟರು. ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಸಬ್ಯಾಸ್ಟಿನ್, ಕಸಾಪ ಘಟಕದ ಕಾರ್ಯದರ್ಶಿ ಟಿ.ಲೋಕೇಶ್, ಲೋಕೇಶ್, ಮಧುಕರ್ , ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.